ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ದ ಆರಂಭಿಸಿರುವ ರಷ್ಯಾ ಇಂದು ಕದನ ವಿರಾಮ ಘೋಷಿಸಿದೆ.
ಸಂಪೂರ್ಣ ಉಕ್ರೇನ್ ನಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, 6 ಗಂಟೆಯಿಂದ ಇದು ಜಾರಿಗೆ ಬಂದಿದೆ.
ಅಲ್ಲಿನ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುವಾಗುವಂತೆ ಈ ಕದನ ವಿರಾಮ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.
ರಷ್ಯಾದ ಈ ನಡೆ ವಿಶ್ವವನ್ನು ಅಚ್ಚರಿಗೊಳಿಸಿದ್ದು, ಏಕಾಏಕಿ ಕದನ ವಿರಾಮ ಘೋಷಿಸಿರುವುದರಿಂದ ಈಗಾಗಲೇ ಉಕ್ರೇನ್ ನ್ನು ರಷ್ಯಾ ತನ್ನ ಕೈ ವಶ ಮಾಡಿಕೊಂಡಿದೆಯಾ ಎಂಬ ಅನುಮಾನ ಮೂಡಿದೆ.
ಕೆಲವೊಂದು ಮೂಲಗಳ ಪ್ರಕಾರ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದೇಶ ಪ್ರಜೆಗಳ ಸುರಕ್ಷಿತ ತೆರವಿಗೆ ಒತ್ತಡ ಹೆಚ್ಚಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೇ 10 ದಿನಗಳಾಗುತ್ತಾ ಬಂದರೂ ರಷ್ಯಾ ಸೈನಿಕರಿಗೆ ಉಕ್ರೇನ್ ನ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ರಷ್ಯಾ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.