ನವದೆಹಲಿ: ನಾವು ಸಲಹೆ ನೀಡಿದ ನಂತರ 20,000 ಕ್ಕೂ ಹೆಚ್ಚು ಭಾರತೀಯರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಅಲ್ಲಿ ಹೆಚ್ಚು ಜನರಿದ್ದಾರೆ, ಆದರೆ ಇಷ್ಟೊಂದು ಜನರು ಉಕ್ರೇನ್ ತೊರೆದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದು MEA ತಿಳಿಸಿದೆ.
IAF ನ C-17 ವಿಮಾನ ಸೇರಿದಂತೆ 16 ವಿಮಾನಗಳನ್ನು ಮುಂದಿನ 24 ಗಂಟೆಗಳ ಕಾಲ ಕಾರ್ಯಾಚರಣೆಗೆ ನಿಗದಿಪಡಿಸಲಾಗಿದೆ. ಪೂರ್ವ ಉಕ್ರೇನ್ ವಿಶೇಷವಾಗಿ ಖಾರ್ಕಿವ್ ಮತ್ತು ಪಿಸೊಚಿನ್ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ. ಕೆಲವು ಬಸ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. 5 ಬಸ್ ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ, ನಂತರ ಹೆಚ್ಚಿನ ಬಸ್ ಗಳು ಬರಲಿವೆ. ಪಿಸೋಚಿನ್ ನಲ್ಲಿ 900-1000 ಭಾರತೀಯರು ಮತ್ತು ಸುಮಿಯಲ್ಲಿ 700 ಕ್ಕೂ ಅಧಿಕ ಜನರು ಸಿಕ್ಕಿಬಿದ್ದಿದ್ದಾರೆ. ನಾವು ಸುಮಿ ಬಗ್ಗೆ ಚಿಂತಿತರಾಗಿದ್ದೇವೆ ಎಂದು MEA ತಿಳಿಸಿದೆ.
ವಿಶೇಷ ರೈಲುಗಳಿಗಾಗಿ ನಾವು ಉಕ್ರೇನ್ ಅಧಿಕಾರಿಗಳಿಗೆ ವಿನಂತಿಸಿದ್ದೇವೆ. ಆದರೆ ಇನ್ನೂ ಏನನ್ನೂ ಕೇಳಿಲ್ಲ. ಈ ನಡುವೆ ಬಸ್ ಗಳನ್ನು ವ್ಯವಸ್ಥೆಗೊಳಿಸುತ್ತಿದ್ದೇವೆ. ಕದನ ವಿರಾಮವಿಲ್ಲದ ಕಾರಣ ತೆರವು ಕಾರ್ಯಾಚರಣೆ ಕಷ್ಟಕರವಾಗಿದೆ. ಉಕ್ರೇನ್ ಮತ್ತು ರಷ್ಯಾ, ಕನಿಷ್ಠ ಕದನ ವಿರಾಮ ಘೋಷಿಸಿದಲ್ಲಿ ನಾವು ನಮ್ಮ ಜನರನ್ನು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬಹುದು ಎಂದು ಹೇಳಲಾಗಿದೆ.
ಕೊನೆಯ ವ್ಯಕ್ತಿಯನ್ನು ಸ್ಥಳಾಂತರಿಸುವವರೆಗೂ ನಾವು ಆಪರೇಷನ್ ಗಂಗಾವನ್ನು ಮುಂದುವರಿಸುತ್ತೇವೆ. ಸರಿಸುಮಾರು 2000-3000(ಹೆಚ್ಚು ಭಾರತೀಯರು) ಇರುವ ಸಾಧ್ಯತೆಯಿದೆ, ಸಂಖ್ಯೆಯು ಬದಲಾಗಬಹುದು. ನಾವು ಒಬ್ಬ ಬಾಂಗ್ಲಾದೇಶದ ಪ್ರಜೆಯನ್ನು ಸ್ಥಳಾಂತರಿಸಿದ್ದೇವೆ. ಸ್ಥಳಾಂತರಿಸಲು ನೇಪಾಳದ ಪ್ರಜೆಯಿಂದ ವಿನಂತಿಯನ್ನು ಸ್ವೀಕರಿಸಿದ್ದೇವೆ ಎಂದು MEA ತಿಳಿಸಿದೆ.
ಯಾವುದೇ ಭಾರತೀಯರನ್ನು ಒತ್ತೆಯಾಳಾಗಿ ಇರಿಸಿರುವ ಬಗ್ಗೆ ನಮಗೆ ತಿಳಿದಿಲ್ಲ. ಖಾರ್ಕಿವ್, ಉಕ್ರೇನ್ ನಲ್ಲಿ ಭದ್ರತಾ ಕಾರಣಗಳಿಂದಾಗಿ ಅವರು ಕಷ್ಟ ಎದುರಿಸುತ್ತಿದ್ದಾರೆ, ಆದರೆ ಒತ್ತೆಯಾಳು ಪರಿಸ್ಥಿತಿ ಇಲ್ಲವೆಂದು MEA ಹೇಳಿದೆ.