ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಜಾಗತಿಕ ಸಮುದಾಯದ ಜೊತೆಗೆ ಭಾರತವು ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಭಾರತವು, ಹಿಂಸಾಚಾರವನ್ನು ನಿಲ್ಲಿಸಿ, ಯುದ್ಧವನ್ನು ಕೊನೆಗೊಳಿಸಿ ಎಂದು ಕರೆ ನೀಡಿದೆ.
ಇತ್ತ ಸ್ವಾಮೀಜಿಯೊಬ್ಬರು ಯುದ್ಧವನ್ನು ನಿಲ್ಲಿಸಿ ಎಂದು ‘ಆದೇಶ’ ನೀಡುವ ವಿಶಿಷ್ಟ ರೀತಿಯಲ್ಲಿ ಮಾತನಾಡಿ ವೈರಲ್ ಆಗಿದ್ದಾರೆ. 38 ಸೆಕೆಂಡ್ಗಳ ಕ್ಲಿಪ್ನಲ್ಲಿ ಅವರು, ರಷ್ಯಾ ರುಕ್ ಜಾಯೆ. ಉಕ್ರೇನ್ ಜುಕ್ ಜಾಯೆ ಅಂದರೆ, ರಷ್ಯಾ ನಿಲ್ಲಿಸಲಿ, ಉಕ್ರೇನ್ ಶರಣಾಗಲಿ ಎಂದಿದ್ದಾರೆ. ಜೊತೆಗೆ ಇದು ನನ್ನ ಆದೇಶ, ಯುದ್ಧವನ್ನು ನಿಲ್ಲಿಸಿ ಎಂದು ಆದೇಶಿಸಿದ್ದಾರೆ.
ವಾಹನ ಸವಾರರಿಗೆ ಸಿಹಿ ಸುದ್ದಿ: ಉಚಿತ ಪೆಟ್ರೋಲ್, ಕ್ಯಾಶ್ ಬ್ಯಾಕ್ ಆಫರ್ ಕ್ರೆಡಿಟ್ ಕಾರ್ಡ್ ಬಿಡುಗಡೆ
ರಷ್ಯಾ ಮಹಾನ್ ರಾಷ್ಟ್ರ ಹಾಗಾಗಿ ಯುದ್ಧ ನಿಲ್ಲಿಸಲಿ. ಉಕ್ರೇನ್ ತಪ್ಪು ಮಾಡಿದೆ, ಹಾಗಾಗಿ ಕ್ಷಮೆ ಕೇಳಲಿ. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ, ಆಗಲೇ ಮಹಾವಿನಾಶವಾಗುವುದು ನಿಲ್ಲುತ್ತದೆ ಎಂದು ಹಿಂದಿಯಲ್ಲಿ ನುಡಿದಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಗೌರವ್ ಸಿಂಗ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋಗೆ ಒಂದು ಲಕ್ಷಕ್ಕು ಅಧಿಕ ವೀಕ್ಷಣೆಗಳಾಗಿದ್ದು, 5,200ಕ್ಕೂ ಹೆಚ್ಚು ಲೈಕ್ಸ್ ಹಾಗೂ 1200ಕ್ಕೂ ಹೆಚ್ಚು ರೀಟ್ವಿಟ್ ಗಳಿಸಿಕೊಂಡಿದೆ. ಜೊತೆಗೆ ನೆಟ್ಟಿಗರು ಸಹ ವಿಡಿಯೋ ಬಳಸಿಕೊಂಡು ಹಲವು ಮೀಮ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.