ತನ್ನ ಮಾಲೀಕರ 13 ವರ್ಷದ ಮಗಳು ಹಾಗೂ 11 ವರ್ಷದ ಸೋದರ ಸೊಸೆಯ ಬೆತ್ತಲೆ ಫೋಟೋಗಳು ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಆರೋಪದ ಅಡಿಯಲ್ಲಿ ಮನೆಯ ಕೆಲಸಗಾರನಾಗಿದ್ದ 27 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ತನ್ನ ಮಾಲೀಕರ ಮನೆಯಲ್ಲಿ ವಾಸವಿದ್ದ ಈತನು ಆಗಾಗ ಇವರಿಬ್ಬರ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಶೂಟ್ ಮಾಡುತ್ತಿದ್ದ ಎನ್ನಲಾಗಿದೆ.
ಮಾಲೀಕರ ಪುತ್ರಿ ಈತನ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ವೇಳೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತಾನು ಬಟ್ಟೆ ಬದಲಾಯಿಸುತ್ತಿದ್ದ ವಿಡಿಯೋಗಳನ್ನು ಕೆಲಸಗಾರನ ಮೊಬೈಲ್ನಲ್ಲಿ ಕಂಡ ಪುತ್ರಿ ಆಘಾತಕ್ಕೊಳಗಾದಳು ಎನ್ನಲಾಗಿದೆ.
ಈ ಬಗ್ಗೆ ಅಪ್ರಾಪ್ತೆ ತನ್ನ ತಾಯಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354(ಸಿ), ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾರ್ಖಂಡ್ನ ಮೂಲದವನಾದ ಆರೋಪಿಯು ಕಳೆದ 8 ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.