ಕೇರಳ ರಾಜ್ಯವನ್ನು ಮಹಿಳಾ ಸ್ನೇಹಿಯಾಗಿಸಬೇಕು ಎಂಬುದೇ ಸಿಪಿಎಂ ಪಕ್ಷದ ಗುರಿ ಎಂದು, ಮಾರ್ಚ್ 3ನೇ ತಾರೀಖಿನಂದು ನಡೆದ ಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಆದರೆ ಹೇಳುವುದೊಂದು ಮಾಡುವುದೇ ಇನ್ನೊಂದು ಎನ್ನುವ ಹಾಗೇ ಸಿಪಿಎಂ ಪಕ್ಷದ ನಾಯಕ ಹಾಗೂ ಕಾರ್ಯದರ್ಶಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇರಳ ಮಹಿಳಾ ಸ್ನೇಹಿ ರಾಜ್ಯವಾಗಬೇಕು ಎಂದು ಪ್ರಸ್ತುತಪಡಿಸಿದ ಸಭೆಯಲ್ಲಿಯೆ, ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಮಹಿಳೆಯರ ಬಗ್ಗೆ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
BIG NEWS: ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ
ಗುರುವಾರ ನಡೆದ ಸಭೆಯಲ್ಲಿ, ಪಕ್ಷವು ಮಹಿಳೆಯರಿಗೆ ರಾಜ್ಯ ಸಮಿತಿಯಲ್ಲಿ 50% ಸ್ಥಾನಗಳನ್ನು ಮೀಸಲಿಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣನ್, ಪಕ್ಷವನ್ನು ನಾಶ ಮಾಡಲು ಈ ಪ್ರಶ್ನೆ ಕೇಳುತ್ತಿದ್ದೀರಾ ಎಂದಿದ್ದಾರೆ. ವಿಪರ್ಯಾಸ ಎಂದರೆ ಈ ಪ್ರಶ್ನೆಗು ಮೊದಲು, ಪಕ್ಷದ ಹೊಸ ನೀತಿಗಳ ಪ್ರಕಾರ ಹೆಚ್ಚಿನ ಮಹಿಳೆಯರನ್ನು ರಾಜ್ಯ ಸಮಿತಿಗೆ ಕರೆತರುವ ಉದ್ದೇಶವನ್ನು ಸಿಪಿಎಂ ಹೊಂದಿದೆ ಎಂದು ಬಾಲಕೃಷ್ಣನ್ ಹೇಳಿದ್ದರು.
ಸಧ್ಯ ಬಾಲಕೃಷ್ಣನ್ ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಮಹಿಳಾ ಸ್ನೇಹಿ ರಾಜ್ಯವಾಗಬೇಕು ಎಂದು ಹೇಳಿದ ಸಂದರ್ಭದಲ್ಲೇ ಈ ರೀತಿಯ ಹೇಳಿಕೆಗಳನ್ನ ಹಿರಿಯ ನಾಯಕರೊಬ್ಬರು ನೀಡಿರುವುದು ವಿಪರ್ಯಾಸ ಎಂದು ಹಲವು ಮಹಿಳಾ ನಾಯಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಾಲಕೃಷ್ಣನ್ ವಿರುದ್ಧ ಸ್ವಪಕ್ಷದ ನಾಯಕಿಯರೆ ತಿರುಗಿಬಿದ್ದಿದ್ದಾರೆ. ನಮ್ಮ ಪಕ್ಷದಲ್ಲಿರುವ ಕೆಲವರಿಗೆ ಪಿತೃಪ್ರಭುತ್ವದ ಮನಸ್ಥಿತಿ ಇದೆ ಎಂದು ಕೇರಳದ ಉನ್ನತ ಶಿಕ್ಷಣ ಸಚಿವೆ ಬಿಂದು ಹೇಳಿಕೆ ನೀಡಿದ್ದಾರೆ.