ಫೆಬ್ರವರಿ 28 ರಂದು ಮಣಿಪುರದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಆದರೆ ಅಂದು ಮತಗಟ್ಟೆಗಳಲ್ಲಿ ನಡೆದ ಹಿಂಸಾಚಾರ ಹಾಗೂ ಇವಿಎಂಗಳ ಹಾನಿಯ ಮಾಹಿತಿ ಸಂಗ್ರಹಿಸಿರುವ ಚುನಾವಣಾ ಆಯೋಗ, ಮೊದಲ ಹಂತದಲ್ಲಿ ಮತದಾನ ನಡೆದ ಐದು ವಿಧಾನಸಭಾ ಕ್ಷೇತ್ರಗಳ 12 ಬೂತ್‌ಗಳಲ್ಲಿ ಮರು ಮತದಾನಕ್ಕೆ ಆದೇಶಿಸಿದೆ.
ಆಯಾ ಬೂತ್‌ಗಳ ಚುನಾವಣಾಧಿಕಾರಿಗಳಿಂದ ಸ್ವೀಕರಿಸಿದ ವರದಿ ಮತ್ತು ಮಾಹಿತಿಯ ಆಧಾರದ ಮೇಲೆ ಈ ನಿರ್ಧಾರ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಹೇಳಿಕೆಯಲ್ಲಿ ತಿಳಿದು ಬಂದಿದೆ. ಮತದಾನ ನಡೆಯುವ ಸಮಯದಲ್ಲಿ ಹಾಗೂ ಮತದಾನ ನಡೆದ ನಂತರ ಕೆಲವು ದುಷ್ಕರ್ಮಿಗಳು ಇವಿಎಂಗಳಿಗೆ ಹಾನಿ ಮಾಡಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
35ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ದಾಸ್
ಮಣಿಪುರದ ಖುಂಡ್ರಕ್‌ಪಾಮ್, ಸೈಟು, ಥನ್ಲೋನ್, ಹೆಂಗ್ಲೆಪ್ ಮತ್ತು ಚುರಾಚಂದ್‌ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಮತದಾನ ನಡೆಯಲಿದೆ. ಮಾರ್ಚ್ 5 ರಂದು ಮರು ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ ರಾಜ್ಯದ 22 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.