ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ನನಗೆ ಮಾತ್ರವಲ್ಲ ರಾಜ್ಯದ ಪ್ರತಿಯೊಬ್ಬರಿಗೂ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳೇನೋ ಇದೆ. ಯಾವ ರೀತಿ ಕಾರ್ಯಕ್ರಮಗಳನ್ನು ಘೋಷಿಸಲಿದ್ದಾರೆ ಎಂಬ ಕುತೂಹಲವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬೊಮ್ಮಾಯಿ ಸುದೀರ್ಘ ಆಡಳಿತದ ಅನುಭವ ಹೊಂದಿರುವವರು. ಹಾಗಾಗಿ ಸಿಎಂ ಬೊಮ್ಮಾಯಿ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಆ ನಿರೀಕ್ಷೆಗಳನ್ನು ಈಡೇರಿಸಲು ಅನುಮತಿ ಒಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
BIG NEWS: ಪತ್ನಿಯಷ್ಟೇ ಚಂದದ ಮಗಳು ಹುಟ್ಟಿದ್ದಾಳೆ; ಸಂತಸ ಹಂಚಿಕೊಂಡ ರಿಷಬ್ ಶೆಟ್ಟಿ
ಬಜೆಟ್ ನಲ್ಲಿ ಕಾರ್ಯಕ್ರಮಗಳನ್ನು ಕೊಡಲು, ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಅವರ ಹಿಂದೆ ಇರುವವರು ಬಿಡಬೇಕಲ್ಲವೇ? ಅವರ ಅನುಮತಿ ಸಿಗಬೇಕಲ್ಲವೇ? ಎಂದು ಕೇಳುವ ಮೂಲಕ ಪರೋಕ್ಷವಾಗಿ ಆರ್ ಎಸ್ ಎಸ್ ವಿರುದ್ಧ ತೀಕ್ಷ್ಣವಾಗಿ ಗುಡುಗಿದ್ದಾರೆ.
ಬಡವರಿಗೆ, ತುಡಿತಕ್ಕೊಳಗಾದವರಿಗೆ, ರೈತರಿಗೆ, ಆರ್ಥಿಕವಾಗಿ ಸಂಕಷ್ಟಕ್ಕೀಡಾದವರಿಗೆ ಯಾವ ಕಾರ್ಯಕ್ರಮಗಳನ್ನು ಘೋಷಿಸಲಿದ್ದಾರೆ. ಯಾವ ಹೊಸ ಯೋಜನೆಗಳನ್ನು ಕೊಡುತ್ತಾರೆ ಎಂಬ ಕುತೂಹಲ ನನಗೂ ಇದೆ. ಬಜೆಟ್ ಮಂಡನೆಯನ್ನೆ ಕಾಯುತ್ತಿದ್ದೇನೆ ಎಂದು ಹೇಳಿದರು.