alex Certify ಭರವಸೆಯ ಸೇತುವೆ….! ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಮೋದಿ ಕಾರ್ಟೂನ್ ಟ್ವೀಟ್ ಮಾಡಿದ್ರು ಪಿಯೂಷ್ ಗೋಯಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರವಸೆಯ ಸೇತುವೆ….! ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಮೋದಿ ಕಾರ್ಟೂನ್ ಟ್ವೀಟ್ ಮಾಡಿದ್ರು ಪಿಯೂಷ್ ಗೋಯಲ್

ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೋದಿ ಕಾರ್ಟೂನ್ ಅನ್ನು ಟ್ವೀಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತವನ್ನು ತಲುಪಲು ನದಿಯ ಮೇಲೆ ಸೇತುವೆಯಂತೆ ಪ್ರಧಾನಿ ನರೇಂದ್ರ ಮೋದಿಯಿರುವ ಕಾರ್ಟೂನ್ ಅನ್ನು ಕೇಂದ್ರ ಸಚಿವರು ಪೋಸ್ಟ್ ಮಾಡಿದ್ದು, ಭಾರತದ ಭರವಸೆಯ ಸೇತುವೆ ಎಂದು ಶೀರ್ಷಿಕೆ ಬರೆದಿದ್ದಾರೆ.

ಭಾರತ ಸರ್ಕಾರದ ಆಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನಗಳನ್ನು ನಿಯೋಜಿಸಲಾಗುತ್ತಿದೆ. ಪಾಕಿಸ್ತಾನ, ಅಮೆರಿಕಾ, ಚೀನಾ ಮುಂತಾದ ದೇಶಗಳ ಪ್ರಜೆಗಳು ದಿಕ್ಕು ದೆಸೆಯಿಲ್ಲದೆ ನಿಂತು ನೋಡುತ್ತಿದ್ದರೆ, ಭಾರತೀಯ ವಿದ್ಯಾರ್ಥಿಗಳಿಗೆ ಮೋದಿ ಸೇತುವೆಯಾಗಿದ್ದಾರೆ ಎಂಬುದನ್ನು ಬಿಂಬಿಸುವ ಕಾರ್ಟೂನ್ ಅನ್ನು ಸಚಿವರು ಹಂಚಿಕೊಂಡಿದ್ದಾರೆ.

ಇನ್ನು ಕೇಂದ್ರ ಸಚಿವರ ಈ ಟ್ವೀಟ್ ಗೆ ಭಿನ್ನ-ವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲವರು ಹೌದು ಎಂದು ಸಮ್ಮತಿ ಸೂಚಿಸಿ ಸಂತೋಷ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಭಾರತವು ವಿದೇಶದಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ. ಯುದ್ಧ ಪೀಡಿತ ಪ್ರದೇಶಗಳಿಂದ ಭಾರತೀಯರನ್ನು ಮರಳಿ ಕರೆತರುವುದು ಸರ್ಕಾರದ ಜವಾಬ್ದಾರಿಯಾಗಿದೆ ಅಂತಲೂ ಕೆಲವು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

— Piyush Goyal (मोदी का परिवार) (@PiyushGoyal) March 3, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...