ಮುಂಬೈ: ಖ್ಯಾತ ಸಂಗೀತ ನಿರ್ದೇಶದ ಇಳಯರಾಜ ಮ್ಯೂಸಿಕ್ ಕಂಪನಿಯ ವಿರುದ್ಧ ಸೋನಿ ಮ್ಯೂಸಿಕ್ ಬಾಂಬೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಲಾಗಿದೆ ಆರೋಪಿಸಿದೆ.
ಸೋನಿ ಮ್ಯೂಸಿಕ್ ಎಂಟರ್ ಟೈನ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಸೋನಿ) ಸೌಂಡ್ ರೆಕಾರ್ಡಿಂಗ್‌ಗಳಲ್ಲಿ ಸೋನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದಂತೆ ಇಳಯರಾಜ ಮ್ಯೂಸಿಕ್ ಎನ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್(ಐಎಂಎಂಪಿಎಲ್) ವಿರುದ್ಧ ಶಾಶ್ವತ ತಡೆಯಾಜ್ಞೆ ಕೋರಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದೆ.
ಡಿಸೆಂಬರ್ 2021 ರಲ್ಲಿ, Echo Recording Company Pvt Ltd. ನಿಂದ ಹಕ್ಕುಸ್ವಾಮ್ಯವನ್ನು ಪಡೆದುಕೊಂಡಿರುವ ಹಾಡುಗಳ ಒಂದು ಭಾಗವು YouTube ನಲ್ಲಿ ಲಭ್ಯವಿದೆ. IMMPL ಅದನ್ನು ಸಾರ್ವಜನಿಕರಿಗೆ ಪ್ರಸಾರ ಮಾಡಲು ಮತ್ತು ವಿತರಿಸಲು ಪ್ರಾರಂಭಿಸಿದೆ ಎಂದು ಸೋನಿ ಮ್ಯೂಸಿಕ್ ಆರೋಪಿಸಿ ಅರ್ಜಿ ಸಲ್ಲಿಸಿದ್ದು, ಮೊಕದ್ದಮೆಯನ್ನು ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ. 10 ರಷ್ಟು ಬಡ್ಡಿಯೊಂದಿಗೆ 1.5 ಕೋಟಿ ರೂ.ಗಳನ್ನು ಹಾನಿ ಪರಿಹಾರವಾಗಿ ಪಾವತಿಸಲು ಕೋರಲಾಗಿದೆ.