ಶಿವಮೊಗ್ಗ: ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮಾರ್ಚ್ 7 ರಿಂದ 11 ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆವರೆಗೆ ಆಕಾಶವಾಣಿ ಮೂಲಕ ಫೋನ್ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಪ್ರಸಾರ ಭಾರತಿ ಆಕಾಶವಾಣಿ ಕೇಂದ್ರ, ಭದ್ರಾವತಿ ಇಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಮಾ. 7 ರಂದು ದ್ವಿತೀಯ ಭಾಷೆ ಇಂಗ್ಲಿಷ್, ಮಾ.8 ರಂದು ಗಣಿತ, ಮಾ. 9 ರಂದು ವಿಜ್ಞಾನ, ಮಾ. 10 ರಂದು ಸಮಾಜ ವಿಜ್ಞಾನ ಮತ್ತು ಮಾ.11 ರಂದು ಪ್ರಥಮ ಭಾಷೆ ಕನ್ನಡ ಮತ್ತು ತೃತೀಯ ಭಾಷೆ ಹಿಂದಿ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡುವರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ಇವರು ತಿಳಿಸಿದ್ದಾರೆ.