alex Certify ರಷ್ಯಾ ಬೆಲೆ ತೆರುವ ದಿನ ಬಂದೇ ಬರುತ್ತದೆ ಎಂದ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ಬೆಲೆ ತೆರುವ ದಿನ ಬಂದೇ ಬರುತ್ತದೆ ಎಂದ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​….!

ನಮ್ಮ ದೇಶಕ್ಕೆ ಈ ಮಟ್ಟಿಗೆ ಹಾನಿ ಮಾಡಿದ ರಷ್ಯಾವು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬೆಲೆ ತೆರುತ್ತದೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್​ನ ಪ್ರಮುಖ ನಗರಗಳ ಮೇಲೆ ರಷ್ಯಾದ ಕ್ಷಿಪಣಿ ಹಾಗೂ ಬಾಂಬ್​ ದಾಳಿಗಳನ್ನು ಖಂಡಿಸಿ ವೊಲೊಡಿಮಿರ್​ ಈ ಹೇಳಿಕೆಯನ್ನು ನೀಡಿದ್ದಾರೆ.

ಈ ಯುದ್ಧದ ಬಳಿಕ ದೇಶವನ್ನು ಪುನಃ ಕಟ್ಟಲು ನಾನು ಶ್ರಮಿಸುತ್ತೇನೆ. ರಷ್ಯಾವು ಸಂಪೂರ್ಣವಾಗಿ ಉಕ್ರೇನ್​ನ್ನು ಕಟ್ಟಿಹಾಕಲು ಮುಂದಾದರೆ ನಮ್ಮ ಪ್ರತಿರೋಧದ ಹಂತಗಳು ಮುಂದೆ ಬರಲಿವೆ. ನಮ್ಮ ಸ್ವತಂತ್ರವನ್ನು ಹೊರತುಪಡಿಸಿ ನಮಗೆ ಕಳೆದುಕೊಳ್ಳಲು ಏನೂ ಇಲ್ಲ ಎಂದು ಹೇಳಿದರು.

ನಾವು ಪ್ರತಿಯೊಂದು ಮನೆ, ಬೀದಿ, ನಗರಗಳನ್ನು ಪುನಃ ಕಟ್ಟುತ್ತೇವೆ. ನಮ್ಮ ದೇಶದ ವಿರುದ್ಧ, ಉಕ್ರೇನ್​ನ ಪ್ರತಿಯೊಬ್ಬ ಪ್ರಜೆಯ ವಿರುದ್ಧ ನೀವು ಕೈಗೊಂಡ ಕಾರ್ಯಕ್ಕೆ ಖಂಡಿತವಾಗಿಯೂ ಬೆಲೆ ತೆರುತ್ತೀರಿ ಎಂದು ವೊಲೊಡಿಮಿರ್​ ರಷ್ಯಾಗೆ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...