ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ಫಿಟ್ನೆಸ್ ಪ್ರಮಾಣಪತ್ರದ ಸಿಂಧುತ್ವ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಕರಡು ನಿಯಮಗಳಲ್ಲಿ ಸೂಚಿಸಲಾದ ರೀತಿಯಲ್ಲಿ ವಾಹನಗಳ ಮೇಲೆ ಪ್ರದರ್ಶಿಸಬೇಕಿದೆ.
ಭಾರೀ, ಮಧ್ಯಮ ಮತ್ತು ಲಘು ಸರಕುಗಳು ಅಥವಾ ಪ್ರಯಾಣಿಕ ವಾಹನಗಳ ಮೇಲೆ ಎಡಭಾಗದ ಮೇಲಿನ ಅಂಚಿನಲ್ಲಿ ಅದನ್ನು ಪ್ರದರ್ಶಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಆಟೋ ರಿಕ್ಷಾ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಕ್ವಾಡ್ರ್ ಸೈಕಲ್ಗಳ ಮೇಲೆ ಎಡಭಾಗದ ಮೇಲಿನ ಅಂಚಿನಲ್ಲಿ ಪ್ರದರ್ಶಿಸಬೇಕು.
ಮೋಟಾರು ಸೈಕಲ್ ಸಂದರ್ಭದಲ್ಲಿ ಅದನ್ನು ವಾಹನದ ಎದ್ದುಕಾಣುವ ಭಾಗದಲ್ಲಿ ಪ್ರದರ್ಶಿಸಬೇಕು.
ಏರಿಯಲ್ ಬೋಲ್ಡ್ ಸ್ಕ್ರಿಪ್ಟ್ ಮಾದರಿಯಲ್ಲಿ ನೀಲಿ ಹಿನ್ನೆಲೆಯಲ್ಲಿ ಇದನ್ನು ಹಳದಿ ಬಣ್ಣದಲ್ಲಿ ಪ್ರದರ್ಶಿಸಬೇಕಿದೆ.