ಮೈಸೂರು: ರಷ್ಯಾ ತನ್ನ ಸುರಕ್ಷತೆಗಾಗಿ ಉಕ್ರೇನ್ ಮೇಲೆ ಯುದ್ಧ ಸಾರಿದೆ. ನಾವು ರಷ್ಯಾ ವಿರುದ್ಧ ಹೋಗುವುದು ಕಷ್ಟ ಸಾಧ್ಯವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಭಾರತೀಯರ ಏರ್ ಲಿಫ್ಟ್ ವಿಚಾರವಾಗಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಕಾಂಗ್ರೆಸ್ ನಾಯಕರಿಂದ ವಿದೇಶಾಂಗ ನೀತಿ ಪಾಠ ಕಲಿಯಬೇಕಿಲ್ಲ. ರಷ್ಯಾ ಮೇಲೆ ಭಾರತ ಅವಲಂಬನೆ ಸೃಷ್ಟಿಸಿದ್ದೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ರಷ್ಯಾ ತನ್ನ ಭದ್ರತೆಗಾಗಿ ಉಕ್ರೇನ್ ಮೇಲೆ ಯುದ್ಧ ನಡೆಸಿದೆ. ಭಾರತ ರಷ್ಯಾ ಮೇಲೆ ಅತಿ ಹೆಚ್ಚು ಅವಲಂಬಿತವಾಗಿದೆ. ರಷ್ಯಾ ಎದುರು ಹಾಕಿಕೊಂಡರೆ ಮತ್ತೆ ರಷ್ಯಾ ನಮ್ಮ ನೆರವಿಗೆ ಬರುತ್ತಾ? ಒಂದು ವೇಳೆ ಯುದ್ಧ ಸಂದರ್ಭ ಸೃಷ್ಟಿಯಾದರೆ ರಷ್ಯಾ ಭಾರತದ ಸಹಾಯಕ್ಕೆ ಬರುತ್ತಾ? ಈ ಮುಂದಾಲೋಚನೆಯಿಂದಲೇ ಪ್ರಧಾನಿ ಮೋದಿ ತಟಸ್ಥ ನಿಲುವು ತಳೆದಿದ್ದಾರೆ ಎಂದು ಹೇಳಿದರು.