ಧಾರವಾಡ: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾದ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತದೇಹ ತರಲು ಪ್ರಯತ್ನ ನಡೆದಿದೆ. ಯುದ್ಧದ ಸಂದರ್ಭದಲ್ಲಿ ಮೃತದೇಹ ತರುವುದು ಸುಲಭವಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಬೆಲ್ಲದ್, ಜೀವಂತವಾಗಿರುವವರನ್ನೇ ಏರ್ ಲಿಫ್ಟ್ ಮಾಡಲು ಕಷ್ಟವಾಗುತ್ತಿದೆ. ಸಾಧ್ಯವಾದರೆ ನವೀನ್ ಮೃತದೇಹ ತರಲಾಗುವುದು. ಈ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆ ಕೂಡ ಪ್ರಯತ್ನ ಮಾಡುತ್ತಿದೆ ಎಂದರು.
ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗಬೇಕು. ಮೃತದೇಹದ ಜಾಗದಲ್ಲಿ 8-10 ಜನ ಬರಬಹುದು. ಹೀಗಾಗಿ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಮೊದಲು ನಡೆಯಬೇಕಿದೆ ಎಂದು ಹೇಳಿದರು.