ಮಾಸ್ಕೋ; ಉಕ್ರೇನ್ ವಿರುದ್ಧ ರಷ್ಯಾ ನಡೆಸಿರುವ ಯುದ್ಧಕ್ಕೆ ಸರ್ಕಾರದ ನಡೆ ಖಂಡಿಸಿ ರಷ್ಯಾ ನಾಗರಿಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾದಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುತ್ತಿದೆ.
ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸಿ, ಮಾಸ್ಕೋ ಹಾಗೂ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ. ಈ ನಡುವೆ ಪುಟಿನ್ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದ 70 ವರ್ಷದ ವೃದ್ಧೆಯನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಉಕ್ರೇನ್ ಮೇಲಿನ ತನ್ನ ದಾಳಿ ಸಮರ್ಥಿಸಿಕೊಂಡಿರುವ ರಷ್ಯಾ, ಇದು ಅಚಾನಕ್ ದಾಳಿಯಲ್ಲ, ತುಂಬಾ ಯೋಚಿಸಿ ತೆಗೆದುಕೊಂಡ ನಿರ್ಧಾರ. ಒಂದು ವೇಳೆ ಅಮೆರಿಕಾದೊಂದಿಗೆ ಗಡಿ ಹಂಚಿಕೊಂಡಿರುವ ಮೆಕ್ಸಿಕೊ ಅಥವಾ ಕೆನಡಾಗಳಲ್ಲಿ ನಾವು ಸೇನಾ ನೆಲೆ ಸ್ಥಾಪಿಸಿ, ನಮ್ಮ ಕ್ಷಿಪಣಿಗಳನ್ನು ನಿಯೋಜಿಸಿದರೆ ಅಮೆರಿಕ ಸುಮ್ಮನಿರುವುದೇ ಎಂದು ಪ್ರಶ್ನಿಸಿದೆ.