ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಇಂದು 8ನೇ ದಿನಕ್ಕೆ ಕಾಲಿಟ್ಟಿದ್ದು, ಕೀವ್, ಖಾರ್ಕೀವ್, ಓಲಿವಿಯಾ, ಒಖ್ತಿರ್ಕಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಕ್ಷಿಪಣಿ, ಬಾಂಬ್ ದಾಳಿಗಳನ್ನು ತೀವ್ರಗೊಳಿಸಿದೆ. ರಷ್ಯಾ ಭೀಕರ ದಾಳಿಗೆ ಉಕ್ರೇನ್ ನಲ್ಲಿ 700ಕ್ಕೂ ಅಧಿಕ ಸಂಖ್ಯೆಯಲ್ಲಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಕಳೆದ 8 ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದು, ಮಾ.1ರವರೆಗೆ ಉಕ್ರೇನ್ ನಲ್ಲಿ 752 ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಈ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಲಹೆಗಾರರ ಒಲೆಕ್ಸಿ ಅರೆಸ್ಟೊವಿಚ್ ಮಾಹಿತಿ ಪ್ರಕಾರ ಕಳೆದ 7 ದಿನಗಳ ಯುದ್ಧದಲ್ಲಿ ಉಕ್ರೇನ್, ರಷ್ಯಾದ 7,000 ಸೈನಿಕರನ್ನು ಸದೆಬಡಿದಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಷ್ಯಾದ ಸೇನಾ ಕಮಾಂಡರ್ ಅವರನ್ನು ಬೆಲಾರಸ್ ಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.