ಖಾರ್ಕೀವ್: ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ರಷ್ಯಾ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ, ಖಾರ್ಕಿವ್ ನಲ್ಲಿನ ಭಾರತೀಯರು ತಕ್ಷಣ ನಗರ ತೊರೆಯುವಂತೆ ಮತ್ತೊಮ್ಮೆ ಸೂಚಿಸಿದೆ. ಇದರಿಂದ ವಿದ್ಯಾರ್ಥಿಗಳು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಖಾರ್ಕೀವ್ ನಿಂದ ತಕ್ಷಣ ಹೊರಡುವಂತೆ ಹೇಳುತ್ತಿದ್ದಂತೆ ರಷ್ಯಾ ಬಾಂಬ್ ದಾಳಿ, ಕ್ಷಿಪಣಿ ದಾಳಿಗಳಿಂದ ಜೀವ ಉಳಿಸಿಕೊಳ್ಳಲು ಭಾರತೀಯ ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದು ಹಳ್ಳಿಗಳತ್ತ ಧಾಸುತ್ತಿದ್ದಾರೆ.
ಖಾರ್ಕೀವ್ ನಲ್ಲಿರುವ ಸುಮಾರು 800 ವಿದ್ಯಾರ್ಥಿಗಳು 20.ಕೀ.ಮಿ ನಡೆದು ಅಕ್ಕಪಕ್ಕದ ಹಳ್ಳಿ ಸೇರಿದ್ದು, ರೈಲಿನ ಮೂಲಕ ಗಡಿ ಪ್ರದೇಶಕ್ಕೆ ಬರಲು ಯತ್ನಿಸಿದ್ದಾರೆ. ಆದರೆ ರೈಲು ಹತ್ತಲು ಕೂಡ ಉಕ್ರೇನಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವುದರಿಂದ ಅಲ್ಲಿಯೂ ಪರದಾಡಬೇಕಾದ ಸ್ಥಿತಿ ಎದುರಾಗಿದೆ.
ಈ ನಡುವೆ ಉಕ್ರೇನ್ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ರಷ್ಯಾದ ನಿರಂತರ ಶೆಲ್, ಕ್ಷಿಪಣಿ ದಾಳಿಯಿಂದಾಗಿ ಭಾರತೀಯರ ಸ್ಥಳಾಂತರಕ್ಕೆ ಅಡ್ಡಿಯುಂತಾಗುತಿದೆ. ಸುಮೆ ಪ್ರದೇಶದಲ್ಲಿ ದಾಳಿ ನಿಂತರೆ ಸ್ಥಳಾಂತರ ಸುಗಮವಾಗಲಿದೆ ಎಂದು ತಿಳಿಸಿದೆ.