alex Certify ಕಚಾ ಬಾದಾಮ್ ಹಾಡಿದ ಬಡ್ಯಾಕರ್ ನಂತರ ಸೀಬೆ ಹಣ್ಣಿನ ವ್ಯಾಪಾರಿ ಸರದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚಾ ಬಾದಾಮ್ ಹಾಡಿದ ಬಡ್ಯಾಕರ್ ನಂತರ ಸೀಬೆ ಹಣ್ಣಿನ ವ್ಯಾಪಾರಿ ಸರದಿ….!

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಹಾಡಿರುವ ಕಚಾ ಬಾದಮ್ ಗೀತೆ ಎಷ್ಟು ಜನಪ್ರಿಯವಾಗಿದೆ ಎಂಬುದು ಬಹುಶಃ ನಿಮಗೆ ತಿಳಿದಿರಬಹುದು. ಅತ್ಯಂತ ವೇಗದಲ್ಲಿ ಈ ಹಾಡು ಇಂಟರ್ನೆಟ್ ನಲ್ಲಿ ಹಿಟ್ ಆಗಿದೆ. ಇದೀಗ ವ್ಯಕ್ತಿಯೊಬ್ಬರು ಬೀದಿಬದಿಯಲ್ಲಿ ಸೀಬೆ ಹಣ್ಣನ್ನು ಮಾರಾಟ ಮಾಡುವ ಮತ್ತೊಂದು ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ. ಅವರ ಮನಮುಟ್ಟುವ ಟ್ಯೂನ್ ಎಲ್ಲರಿಗೂ ಇಷ್ಟವಾಗಿದೆ.

ಯೇ ಹರಿ ಹರಿ, ಕಚ್ಚಿ ಕಚ್ಚಿ, ಪೀಲಿ ಪೀಲಿ, ಪಾಕಿ ಪಾಕಿ, ಮೀಥಿ ಮೀಥಿ, ಗದ್ದರ್ ಗದ್ದರ್, ತಾಜಾ ತಾಜಾ, ನಮಕ್ ಲಗಾ ಕೆ ಖಾಜ್ ಖಾಜಾ ಎಂದು ಗ್ರಾಹಕರನ್ನು ಸೆಳೆಯುವುದಕ್ಕಾಗಿ ಮಾರಾಟ ಈ ರೀತಿ ಹಾಡಿದ್ದಾರೆ.

27 ಸೆಕೆಂಡುಗಳಿರುವ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಆದರೆ, ಈ ವಿಡಿಯೋ ಎಲ್ಲಿಂದ ಬಂದಿದೆ ಹಾಗೂ ಗ್ರಾಹಕರನ್ನು ಆಕರ್ಷಿಸಲು ಹಾಡನ್ನು ಹಾಡಿದ ವೃದ್ಧ ವ್ಯಕ್ತಿಯ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ವಿಡಿಯೋಗೆ ಮಾತ್ರ ನೆಟ್ಟಿಗರು ದೊಡ್ಡ ಥಂಬ್ಸ್ ಅಪ್ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...