alex Certify ಪುಟಿನ್ ಮಹತ್ವದ ನಿರ್ಧಾರ, ಝೆಲೆನ್ ಸ್ಕಿಗೆ ಬಿಗ್ ಶಾಕ್: ಉಕ್ರೇನ್ ಅಧ್ಯಕ್ಷರನ್ನೇ ಪದಚ್ಯುತಿಗೊಳಿಸಿ ಹೊಸ ಅಧ್ಯಕ್ಷನ ನೇಮಿಸಲು ರಷ್ಯಾ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಿನ್ ಮಹತ್ವದ ನಿರ್ಧಾರ, ಝೆಲೆನ್ ಸ್ಕಿಗೆ ಬಿಗ್ ಶಾಕ್: ಉಕ್ರೇನ್ ಅಧ್ಯಕ್ಷರನ್ನೇ ಪದಚ್ಯುತಿಗೊಳಿಸಿ ಹೊಸ ಅಧ್ಯಕ್ಷನ ನೇಮಿಸಲು ರಷ್ಯಾ ಸಿದ್ಧತೆ

ಕೀವ್/ಮಾಸ್ಕೋ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅವರ ಪದಚ್ಯುತಿಗೆ ರಷ್ಯಾ ಮುಂದಾಗಿದೆ. ಝೆಲೆನ್ಸ್ಕಿ ಅವರನ್ನು ಪದಚ್ಯುತಿಗೊಳಿಸಿ ಹೊಸ ಅಧ್ಯಕ್ಷರ ನೇಮಕಕ್ಕೆ ಹುನ್ನಾರ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮಾಜಿ ಅಧ್ಯಕ್ಷರಿಗೆ ಪಟ್ಟಕಟ್ಟಲು ತಯಾರಿ ಮಾಡಿಕೊಂಡಿದ್ದಾರೆ.

ಉಕ್ರೇನ್ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಗೆ ಅಧ್ಯಕ್ಷ ಸ್ಥಾನ ಕಲ್ಪಿಸಲು ಪುಟಿನ್ ಚಿಂತನೆ ನಡೆಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಮಿನ್ಸ್ಕ್ ನಗರಕ್ಕೆ ವಿಕ್ಟರ್ ಅವರನ್ನು ರಷ್ಯಾ ಕರೆದುಕೊಂಡು ಬಂದಿದೆ. ವಿಕ್ಟರ್ ನನ್ನು ಉಕ್ರೇನ್ ಹೊಸ ಅಧ್ಯಕ್ಷನನ್ನಾಗಿ ಮಾಡಿ ಅಧಿಕೃತವಾಗಿ ಘೋಷಿಸಲು ಪುಟಿನ್ ತಯಾರಿ ನಡೆಸಿದ್ದಾರೆ ಎಂದು ಉಕ್ರೇನ್ ಸರ್ಕಾರ ಎಂದು ಆರೋಪ ಮಾಡಿದೆ.

2010 ರಲ್ಲಿ ಉಕ್ರೇನ್‌ ನ ಅಧ್ಯಕ್ಷರಾಗಿ ಚುನಾಯಿತರಾದ ಯಾನುಕೋವಿಚ್ ಅವರು ಬಾಕಿ ಉಳಿದಿರುವ EU ಅಸೋಸಿಯೇಷನ್ ​​ಒಪ್ಪಂದವನ್ನು ತಿರಸ್ಕರಿಸಿದರು. ಬದಲಿಗೆ ರಷ್ಯಾದೊಂದಿಗೆ ನಿಕಟ ಸಂಬಂಧಗಳನ್ನು ಮುಂದುವರಿಸಲು ಮುಂದಾಗಿದ್ದರು. ಇದು ಪ್ರತಿಭಟನೆಗಳಿಗೆ ಕಾರಣವಾಗಿದ್ದಲ್ಲದೇ ಅನೇಕ ಬೆಳವಣಿಗೆಗಳಿಗೆ ನಾಂದಿಯಾಗಿ ಯಾನುಕೋವಿಚ್ ಹುದ್ದೆ ತೊರೆಯುವಂತಾಯಿತು. ನಂತರ ಓಲೆಕ್ಸಾಂಡರ್ ತುರ್ಚಿನೋವ್ ಮತ್ತು ಪೆಟ್ರೋ ಪೊರೊಶೆಂಕೊ ಅಧಿಕಾರ ವಹಿಸಿಕೊಂಡರು. 2019 ರಲ್ಲಿ ಝೆಲೆನ್ಸ್ಕಿಯು ಉಕ್ರೇನ್‌ನ ಅಧ್ಯಕ್ಷರಾಗಿ ಆಯ್ಕೆಯಾದರು,

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...