alex Certify ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್; ‘ಮಂಗಳೂರು ಮುಸ್ಲಿಂ’ ಪೇಜ್ ಅಡ್ಮಿನ್ ಮೇಲೆ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್; ‘ಮಂಗಳೂರು ಮುಸ್ಲಿಂ’ ಪೇಜ್ ಅಡ್ಮಿನ್ ಮೇಲೆ ಕೇಸ್

ಹಿಜಾಬ್​​ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್​ನ ಮೂವರು ನ್ಯಾಯಮೂರ್ತಿಗಳ ಪೈಕಿ ಓರ್ವ ನ್ಯಾಯಮೂರ್ತಿಯ ವಿರುದ್ಧ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ಮಂಗಳೂರು ಮುಸ್ಲಿಮ್ಸ್​ ಎಂಬ ಫೇಸ್​ಬುಕ್ ಪೇಜ್​ನ ಅಡ್ಮಿನ್​ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಸೈಬರ್​ ಕ್ರೈಂ ವಿಭಾಗವು ಬೆಂಗಳೂರಿನ ಅತೀಕ್​ ಷರೀಫ್​ ಹಾಗೂ ಮಂಗಳೂರು ಮುಸ್ಲಿಮ್ಸ್​​ ಅಡ್ಮಿನ್​ ವಿರುದ್ಧ ಫೆಬ್ರವರಿ 23ರಂದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಫೆಬ್ರವರಿ 12ರಂದು ಅತೀಕ್​ ಷರೀಫ್​ ಎಂಬಾತ ನ್ಯಾಯಮೂರ್ತಿಯ ವಿರುದ್ಧ ಅವಹೇಳನಕಾರಿ ಫೇಸ್​ಬುಕ್​ ಪೋಸ್ಟ್​ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಧೀಶರ ವಿರುದ್ಧ ಫೇಸ್​ಬುಕ್​ ಪೋಸ್ಟ್​ನ್ನು ಲೈಕ್​ ಮಾಡಿದವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಟ ಚೇತನ್​ ಕುಮಾರ್​ ಇದೇ ರೀತಿ ನ್ಯಾಯಮೂರ್ತಿಗಳ ವಿರುದ್ಧ ಪೋಸ್ಟ್​ ಹಾಕಿ ಬಂಧನಕ್ಕೊಳಗಾಗಿದ್ದರು ಬಳಿಕ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...