ಸ್ಯಾಮ್ಸಂಗ್ ಕಂಪನಿ Galaxy S22 ಸರಣಿಯ Galaxy S22 Ultra ಮೊಬೈಲ್ ಅನ್ನು ಈ ವರ್ಷದ ಆರಂಭದಲ್ಲೇ ಪರಿಚಯಿಸಿತ್ತು. ಹಾಗಾಗಿ ಸ್ಯಾಮ್ಸಂಗ್ ನೋಟ್ ಸರಣಿಯ ಮೊಬೈಲ್ ಗಳು ಇನ್ನಿಲ್ಲ ಅನ್ನೋದನ್ನು ಗ್ರಾಹಕರು ಆಗಲೇ ಊಹಿಸಿಬಿಟ್ಟಿದ್ದರು. ಇದೀಗ ಖುದ್ದು ಸ್ಯಾಮ್ಸಂಗ್ ಕಂಪನಿಯೇ ಇದನ್ನು ಖಚಿತಪಡಿಸಿದೆ.
ಗ್ಯಾಲಕ್ಸಿ ನೋಟ್ ಗಳು ಇನ್ಮೇಲೆ ಅಲ್ಟ್ರಾ ರೂಪದಲ್ಲಿ ಬರಲಿವೆ ಅಂತಾ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ ಫೋನ್ ವಿಭಾಗದ ಮುಖ್ಯಸ್ಥ ರೋಹ್ ಟೇ ಮೂನ್ ತಿಳಿಸಿದ್ದಾರೆ. ಇದರೊಂದಿಗೆ ಗ್ಯಾಲಕ್ಸಿ ನೋಟ್ ಕೂಡ ಗ್ಯಾಲಕ್ಸಿ ಎಸ್ ಸರಣಿಯ ಸಾಲಿಗೇ ಸೇರ್ಪಡೆಯಾದಂತಾಗಿದೆ.
Galaxy S22 Ultra ಮೊಬೈಲ್ 6.8 ಇಂಚಿನ QHD+ Dynamic AMOLED ಹೊಂದಿದೆ. Qualcomm Snapdragon 8 Gen 1 processor ಇದರಲ್ಲಿದೆ. 12 GB RAM 1 TB ಸ್ಟೋರೇಜ್ ಸ್ಪೇಸ್ ಇದರಲ್ಲಿದೆ. ಆಂಡ್ರಾಯ್ಡ್ 12 OS ಇದಾಗಿದ್ದು, ಸ್ಯಾಮ್ಸಂಗ್ ನ ಪೆನ್-ಎಸ್ ಅನ್ನೂ ಸಪೋರ್ಟ್ ಮಾಡುತ್ತದೆ.
Galaxy S22 Ultra ಅದ್ಭುತ ಕ್ಯಾಮರಾವನ್ನು ಹೊಂದಿದ್ದು, 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಫಿಂಗರ್ ಪ್ರಿಂಟ್ ಸೆನ್ಸರ್, WiFi 6E, WiFi Direct, Bluetooth 5.2 ಫೀಚರ್ ಗಳನ್ನೂ ಅಳವಡಿಸಲಾಗಿದೆ.