
ರೈಲ್ವೆ ಪ್ರಯಾಣಿಕರು ಇನ್ಮುಂದೆ ಆಟೋಮೆಟಿಕ್ ಟಿಕೆಟ್ ವೆಂಡಿಂಗ್ ಮಷಿನ್ ಮೂಲಕ ಪೇಟಿಎಂ ಕ್ಯೂಆರ್ ಕೋಡ್ ಅಥವಾ ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಬುಕ್ ಮಾಡಬಹುದು. ಇದಕ್ಕಾಗಿಯೇ ಭಾರತೀಯ ರೈಲ್ವೆ ಇಲಾಖೆ ಪೇಟಿಎಂ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಇದೇ ಮೊದಲ ಬಾರಿಗೆ ರೈಲ್ವೇ ಪ್ರಯಾಣಿಕರು ATVMಗಳಲ್ಲಿ UPI ಮೂಲಕ ಟಿಕೆಟ್ ಸೇವೆಗಳಿಗೆ ಡಿಜಿಟಲ್ ಪಾವತಿ ಮಾಡಲು ಅವಕಾಶ ಕಲ್ಪಿಸಿದೆ. ಮೊದಲಿಗೆ ನೀವು ಎಲ್ಲಿಂದ ಎಲ್ಲಿಗೆ ಹೋಗಬೇಕು ಅನ್ನೋದನ್ನು ATVM ಆಯ್ಕೆ ಮಾಡಿಕೊಳ್ಳಿ.
ಪೇಮೆಂಟ್ ಆಪ್ಷನ್ ನಲ್ಲಿ ಪೇಟಿಎಂ ಯುಪಿಐ ಅನ್ನು ಆಯ್ದುಕೊಳ್ಳಿ. ಅದಾದ ಮೇಲೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈ ಪ್ರಕ್ರಿಯೆ ಪೂರ್ತಿಯಾದ ಮೇಲೆ ನಿಮಗೆ ಟಿಕೆಟ್ ಸಿಗುತ್ತದೆ.
ಇದಲ್ಲದೆ ಭಾರತೀಯ ರೈಲ್ವೆಯು ತತ್ಕಾಲ್ ಸೇವೆಗಳನ್ನು ಒದಗಿಸುವ ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದೆ. ConfirmTICKET ಮೊಬೈಲ್ ಅಪ್ಲಿಕೇಶನ್ ನಲ್ಲಿ ಈ ಸೇವೆ ಲಭ್ಯವಿದೆ. ರೈಲು ಟಿಕೆಟ್ಗಳನ್ನು ಕಾಯ್ದಿರಿಸಲು, ಸೀಟ್ ಲಭ್ಯತೆಯನ್ನು ಪರಿಶೀಲಿಸಲು, ರೈಲು ವೇಳಾಪಟ್ಟಿಗಳನ್ನು ಪರಿಶೀಲಿಸಲು ಮತ್ತು ಅವುಗಳನ್ನು ಆಫ್ಲೈನ್ನಲ್ಲಿ ಸೇವ್ ಮಾಡಿಕೊಳ್ಳಲು ಈ ಆಪ್ ಸಹಾಯ ಮಾಡುತ್ತದೆ.
ಬಳಕೆದಾರರು ಇ-ಟಿಕೆಟ್ಗಳಿಗಾಗಿ TDR ಅನ್ನು ಫೈಲ್ ಮಾಡಬಹುದು ಅಥವಾ ಅಪ್ಲಿಕೇಶನ್ ಬಳಸಿಕೊಂಡು ಯಾವುದೇ ಸಮಯದಲ್ಲಿ ಟಿಕೆಟ್ಗಳನ್ನು ರದ್ದುಗೊಳಿಸಬಹುದು. ConfirmTICKET ಮೊಬೈಲ್ ಅಪ್ಲಿಕೇಶನ್, ತತ್ಕಾಲ್ ಕೋಟಾದ ಅಡಿಯಲ್ಲಿ ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.