ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನೆ ತನ್ನ ಭೀಕರ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಕೀವ್, ಖಾರ್ಕಿವ್, ಝೈಟೋಮಿರ್ ಪ್ರದೇಶಗಳಲ್ಲಿ ಮಿಸೈಲ್ ದಾಳಿ ನಡೆಸಿದೆ.
ಝೈಟೋಮಿರ್ ನ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಮಿಸೈಲ್ ದಾಳಿ ನಡೆಸಿದ್ದು, ಕಟ್ಟಡಗಳು, ಮನೆಗಳು ಹೊತ್ತಿ ಉರಿದಿವೆ. ಕಂಗಾಲಾದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಮಾರಿಪೋಲ್ ಸ್ಕೂಲ್ ಬಳಿಯೂ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಕಟ್ಟಡಗಳನ್ನು ಛಿದ್ರಗೊಳಿಸಿದೆ. ಇನ್ನೊಂದೆಡೆ ಉಕ್ರೇನ್ ನ ಖೆರ್ಸನ್ ನಗರದ ಮೇಲೂ ದಾಳಿ ನಡೆಸಿರುವ ರಷ್ಯಾ, ಅಲ್ಲಿನ ರೈಲು ನಿಲ್ದಾಣ, ಬಂದರುಗಳನ್ನು ವಶಕ್ಕೆ ಪಡೆದಿದೆ.
ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ರಶ್ಮಿಕಾ – ವಿಜಯ್ ದೇವರಕೊಂಡ ಜೋಡಿ…..? ಸಂದರ್ಶನದಲ್ಲಿ ಮದುವೆ ವಿಚಾರ ಹೇಳಿದ್ದೇನು ‘ಪುಷ್ಪಾ’ ನಟಿ
ಈ ನಡುವೆ ಉಕ್ರೇನ್ ನ ಎರಡನೇ ಅತಿ ದೊಡ್ಡ ನಗರ ಖಾರ್ಕೀವ್ ವಶಪಡಿಸಿಕೊಳ್ಳಲು ಮುಂದಾಗಿರುವ ರಷ್ಯಾ ಸೇನೆ, ಪ್ಯಾರಾಚೂಟ್ ಗಳ ಮೂಲಕ ಯೋಧರನ್ನು ನಗರಕ್ಕೆ ಇಳಿಸಿದೆ. ಖಾರ್ಕಿವ್ ನಲ್ಲಿ ರಷ್ಯಾ ಏರ್ ಬಾರ್ನ್ ಪಡೆ ಆಗಮಿಸಿದ್ದು, ದಾಳಿ ಇನ್ನಷ್ಟು ತೀವ್ರಗೊಳ್ಳುವ ಎಚ್ಚರಿಕೆ ನೀಡಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಇಂದು 7ನೇ ದಿನವೂ ಮುಂದುವರೆದಿದ್ದು, ರಷ್ಯಾ ದಾಳಿಗೆ ಈವರೆಗೆ ಉಕ್ರೇನ್ ನಲ್ಲಿ 6000 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.