ಬೆಂಗಳೂರು: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ಸಾರ್ವಜನಿಕರಿಂದ ಹಣ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪೇಟಿಎಂ ಮಾಜಿ ಉದ್ಯೋಗಿ ದೀಪಕ್ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಈತ ಪೇಟಿಎಂ ಫಾರ್ ಬಿಜಿನೆಸ್ ಆಪ್ ನಲ್ಲಿ ಡೆಪಾಸಿಟ್ ಇಟ್ಟರೆ ಕ್ಯಾಶ್ ಬ್ಯಾಕ್ ಬರುತ್ತೆ ಎಂದು ನಂಬಿಸಿ ಹಣ ಹಾಕಿಸಿಕೊಂಡು ಬಳಿಕ ತಾನೇ ಅದನ್ನು ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ.
‘ಆಯುಷ್ಮಾನ್’ ಫಲಾನುಭವಿಗಳಿಗೆ ಗುಡ್ ನ್ಯೂಸ್: ಆರೋಗ್ಯ ಪ್ಯಾಕೇಜ್ ಭಾಗವಲ್ಲದ ಚಿಕಿತ್ಸೆಗೂ ಅವಕಾಶ
ಅಲ್ಲದೇ ಹಲವರಿಗೆ ಕರೆ ಮಾಡಿ ಕ್ಯಾಷ್ ಬ್ಯಾಕ್ ಆಫರ್ ಎಂದು ಹೇಳಿ ಹಣ ಕಟ್ಟಿಸಿಕೊಂಡು ವಂಚಿಸುತ್ತಿದ್ದ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.