ರಸ್ತೆ ದಾಟುತ್ತಿದ್ದ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರಿನ ವಿಂಡ್‌ಶೀಲ್ಡ್ ಗೆ ನೀಲ್‍ಗಾಯ್ ಅಪ್ಪಳಿಸಿರೋ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾರಿನ ಮುಂಭಾಗದ ಗಾಜಿಗೆ ಅಪ್ಪಳಿಸಿದ ಪ್ರಾಣಿಯು ಗಾಜಿನೊಳಗೆ ಸಿಲುಕಿದ್ದ ತನ್ನ ಕುತ್ತಿಗೆಯನ್ನು ಹೊರತೆಗೆಯಲು ಹೆಣಗಾಡಿದ ನಂತರ ಸಾವನ್ನಪ್ಪಿದೆ. ಆದರೆ, ಕಾರಿನಲ್ಲಿದ್ದ ವ್ಯಕ್ತಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಕಾರು ಮಾಲೀಕರು ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ನೀಲ್‍ಗಾಯ್ ಅವರ ಕಾರಿನ ಮುಂದೆ ಜಿಗಿದು ವಿಂಡ್‌ಶೀಲ್ಡ್ ಮೂಲಕ ಅಪ್ಪಳಿಸಿದೆ. ಚಾಲಕನು ಕೂಡಲೇ ತನ್ನ ಕಾರನ್ನು ನಿಲ್ಲಿಸಿ, ಅದರಿಂದ ಹೊರ ಬರಲು ಪ್ರಯತ್ನಿಸಿದ್ದಾನೆ. ಆದರೆ, ಪ್ರಾಣಿ ಮಾತ್ರ ಕಾರಿನ ಗಾಜಿನೊಳಗೆ ಸಿಲುಕಿದ್ದು, ಹೊರಬರಲು ಒದ್ದಾಡಿದೆ.
ಹೀಗಾಗಿ ನೀಲಗಾಯ್ ಗೆ ಗಂಭೀರ ಗಾಯಗಳಾಗಿದ್ದು, ಅದು ಸಾವನ್ನಪ್ಪಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಅದರ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಅಪಘಾತವು ವನ್ಯಜೀವಿಗಳ ಆವಾಸಸ್ಥಾನಗಳನ್ನು ಕುಗ್ಗಿಸುವ ದೊಡ್ಡ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.