alex Certify ಮಹಿಳೆಯರ ʼಸೌಂದರ್ಯʼ ಕುರಿತ ಇಂಟ್ರಸ್ಟಿಂಗ್‌ ವಿಚಾರ ಸಮೀಕ್ಷೆಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ʼಸೌಂದರ್ಯʼ ಕುರಿತ ಇಂಟ್ರಸ್ಟಿಂಗ್‌ ವಿಚಾರ ಸಮೀಕ್ಷೆಯಲ್ಲಿ ಬಹಿರಂಗ

ಪೌಷ್ಠಿಕಾಂಶಕ್ಕೂ ಚರ್ಮದ ಆರೋಗ್ಯಕ್ಕೂ ಇರುವ ನಂಟನ್ನು ಭಾರತದ ಮಹಿಳೆಯರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಚರ್ಮದ ಆರೋಗ್ಯ ಮತ್ತು ಹೊಳಪಿಗೆ ನಾವು ಸೇವಿಸುವ ಆಹಾರವೇ ಮೂಲ. ಆರೋಗ್ಯಕರ ಜೀವನಶೈಲಿ ಮತ್ತು ಪೌಷ್ಠಿಕ ಆಹಾರದಿಂದ ಸುಂದರವಾದ ತ್ವಚೆಯನ್ನು ಪಡೆಯಬಹುದು.

ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.72ರಷ್ಟು ಮಹಿಳೆಯರು ಚರ್ಮದ ಸೌಂದರ್ಯಕ್ಕೆ ನಾವು ಸೇವಿಸುವ ಆಹಾರವೇ ಕಾರಣ ಅನ್ನೋದನ್ನು ತಿಳಿದಿದ್ದಾರೆ. ಇದರಲ್ಲಿ ಬಹುಮುಖ್ಯವಾದವುಗಳೆಂದರೆ ಹಣ್ಣು ಹಾಗೂ ಬಾದಾಮಿ.

ಬಾದಾಮಿಯಲ್ಲಿ ವಿಟಮಿನ್‌ ಇ ಇರುವುದರಿಂದ ಶೇ.59 ರಷ್ಟು ಮಹಿಳೆಯರು ಪ್ರತಿದಿನ ಬಾದಾಮಿಯನ್ನು ನೆನೆಸಿ ಅಥವಾ ಹಾಗೆಯೇ ಸೇವಿಸುತ್ತಿದ್ದಾರೆ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 30-39 ವಯಸ್ಸಿನ ಮಹಿಳೆಯರು ಬಾದಾಮಿ ತಿನ್ನುವುದರಿಂದ ಚರ್ಮದ ಸುಕ್ಕು ಮಾಯವಾಗುತ್ತದೆ.

ಚರ್ಮಕ್ಕೆ ವಿಶೇಷ ಹೊಳಪು ಬರುತ್ತದೆ ಮತ್ತು ಚರ್ಮವನ್ನು ಅದನ್ನ ರಕ್ಷಣೆ ಮಾಡುತ್ತದೆ. 6 ತಿಂಗಳುಗಳಿಂದ ಬಾದಾಮಿ ಸೇವಿಸುತ್ತಿರುವವರಲ್ಲಿ ಈ ಬದಲಾವಣೆಗಳನ್ನು ನೀವು ಗಮನಿಸಬಹುದು. ದೆಹಲಿ, ಲಖ್ನೌ, ಲುಧಿಯಾನಾ, ಜೈಪುರ, ಇಂದೋರ್‌, ಕೋಲ್ಕತ್ತಾ, ಭುವನೇಶ್ವರ, ಮುಂಬೈ, ಅಹಮದಾಬಾದ್, ಪುಣೆ, ಬೆಂಗಳೂರು, ಕೊಯಂಬತ್ತೂರು, ಹೈದ್ರಾಬಾದ್‌ ಮತ್ತು ಚೆನ್ನೈನ 3959 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಪ್ರತಿದಿನ ಶೇ.59ರಷ್ಟು ಮಹಿಳೆಯರು ಬಾದಾಮಿ ತಿನ್ನುತ್ತಿದ್ದು, ಅವರ ತ್ವಚೆಯಲ್ಲಿ ಬದಲಾವಣೆ ಕಂಡುಬಂದಿರುವುದು ದೃಢಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...