ಯುರೋಪಿಯನ್ ಒಕ್ಕೂಟಕ್ಕೆ ಉಕ್ರೇನ್ ದೇಶವನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ರಷ್ಯಾಗೆ ಯುರೋಪಿಯನ್ ಒಕ್ಕೂಟ ಸರಿಯಾಗಿ ತಿರುಗೇಟು ನೀಡಿದೆ.
ಮಗ್ಗುಲಲ್ಲೇ ಇರುವ ಉಕ್ರೇನ್ ನ್ಯಾಟೋ ಗೆ ಸೇರಲು ರಷ್ಯಾ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮರವನ್ನೇ ಸಾರಿದ್ದಾರೆ. ಅಪಾರ ಸಾವು, ನೋವು ಸಂಭವಿಸಿದೆ. ಉಕ್ರೇನ್ ದಿಟ್ಟ ಹೋರಾಟವನ್ನೇ ನಡೆಸಿದ್ದು, ಇದಕ್ಕೆ ಯುರೋಪಿಯನ್ ಒಕ್ಕೂಟ ಕೈಜೋಡಿಸಿದೆ.
ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ. ಉಕ್ರೇನ್ ಮನವಿಯನ್ನು ಯುರೋಪಿಯನ್ ಯೂನಿಯನ್ ಅಂಗೀಕರಿಸಿದೆ. ಒಕ್ಕೂಟ ಸೇರ್ಪಡೆಗೆ ಉಕ್ರೇನ್ ಅರ್ಜಿ ಸಲ್ಲಿಸಿದ್ದು, ಇದನ್ನು ಅಂಗೀಕರಿಸಿ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ಸೇರಿ ಅಗತ್ಯ ನೆರವು ನೀಡಲಾಗ್ತಿದೆ.