ಉಕ್ರೇನ್ ನಲ್ಲಿರುವ ಭಾರತೀಯರನ್ನು ಭಾರತ ಸರ್ಕಾರ ಸರಿಯಾಗಿ ರಕ್ಷಣೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರ್ತಿವೆ. ಪ್ರತಿಪಕ್ಷಗಳಿಂದ ಟೀಕೆಗಳು ವ್ಯಕ್ತವಾಗ್ತಿವೆ. ಕೆಲ ನಾಗರಿಕರ ವಿಡಿಯೋಗಳನ್ನು ಹಂಚಿಕೊಳ್ಳಲಾಗ್ತಿದೆ.
ಈ ಎಲ್ಲ ವಾದ-ವಿವಾದಗಳಿಗೆ ಭಾರತ ಸರ್ಕಾರ ಉತ್ತರ ನೀಡಿದೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ಮಾಡ್ತಿರುವ ಕೆಲಸವನ್ನು ಭಾರತ ಅಮೆರಿಕಾ, ಯುಕೆ ಮತ್ತು ಚೀನಾ ಜೊತೆ ಹೋಲಿಕೆ ಮಾಡಿದೆ. ಉಕ್ರೇನ್ ನಲ್ಲಿರುವ ಭಾರತೀಯರೊಂದಿಗೆ ‘ಆಪರೇಷನ್ ಗಂಗಾ’ ನಡೆಯುತ್ತಿದೆ ಎಂದು ಭಾರತ ಹೇಳಿದೆ.
ಇತರ ದೇಶಗಳು ಹಂಚಿಕೊಂಡಿರುವ ಮಾಹಿತಿಯನ್ನು ಭಾರತ ಸರ್ಕಾರ ಜನತೆ ಮುಂದಿಟ್ಟಿದೆ. ಇತರ ದೇಶಗಳು ತಮ್ಮ ನಾಗರಿಕರನ್ನು ದೊಡ್ಡ ಪ್ರಮಾಣದಲ್ಲಿ ರಕ್ಷಣೆ ಮಾಡ್ತಿಲ್ಲ. ಕೆಲ ದೇಶಗಳು ತಮ್ಮ ನಾಗರಿಕರಿಗೆ ಸಹಾಯ ಮಾಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದು ಭಾರತ ಸರ್ಕಾರ ಹೇಳಿದೆ.
ಚೀನಾ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಭಾರತ ಆಪರೇಷನ್ ಗಂಗಾದೊಂದಿಗೆ ಮುಂದುವರಿಯುತ್ತಿದೆ. ಭಾರತವು ಸಹಾಯವಾಣಿ ಸಂಖ್ಯೆ, ಸಲಹೆಗೆ ವ್ಯವಸ್ಥೆ ಮಾಡಿದೆ. ಉಕ್ರೇನ್ನಲ್ಲಿ ಚೀನಾದ ನಾಗರಿಕರ ಮೇಲೆ ದಾಳಿ ಮಾಡಲಾಗುತ್ತಿದ್ದು, ಭಾರತೀಯ ಧ್ವಜಗಳನ್ನು ಹೊಂದಿರುವ ಬಸ್ಗಳಿಗೆ ಸುರಕ್ಷಿತ ಮಾರ್ಗವನ್ನು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಕೆಲ ವಿಷ್ಯದಲ್ಲಿ ಯುಎಸ್ ಮತ್ತು ಭಾರತ ಒಂದೇ ಹಂತದಲ್ಲಿ ಕೆಲಸ ಮಾಡ್ತಿದೆ. ಯುಕ್ರೇನ್ ಗಡಿಯಲ್ಲಿರುವ ನಾಗರಿಕರಿಗೆ ಆಹಾರ ಒದಗಿಸುವ ಪ್ರಯತ್ನ ಮುಂದುವರೆದಿದೆ. ಉಕ್ರೇನ್ನಲ್ಲಿ ಸಿಲುಕಿರುವ ತನ್ನ ಹೆಚ್ಚಿನ ನಾಗರಿಕರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ.
ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇನ್ನೂ ಕಾರ್ಯನಿರ್ವಹಿಸುತ್ತಿರುವಾಗಲೇ ಬ್ರಿಟಿಷ್ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಯಾವುದೇ ಹೆಚ್ಚುವರಿ ಸಹಾಯವಿಲ್ಲದೆ ಉಕ್ರೇನಿಯನ್ ಅಧಿಕಾರಿಗಳ ಸಲಹೆಯನ್ನು ಅನುಸರಿಸಲು ಬ್ರಿಟನ್ ತನ್ನ ನಾಗರಿಕರನ್ನು ಕೇಳಿಕೊಂಡಿದೆ ಎಂದು ಭಾರತ ಸರ್ಕಾರ ಹೇಳಿದೆ.