ಹಣವಿಲ್ಲದೆ ಜೀವನವಿಲ್ಲ. ಸಂಪಾದನೆಗಾಗಿ ಜನರು ಬೇರೆ ಬೇರೆ ದಾರಿಯನ್ನು ಹುಡುಕ್ತಾರೆ. ಕಚೇರಿ ಕೆಲಸ, ವ್ಯಾಪಾರ, ನಟನೆ ಹೀಗೆ ಬೇರೆ ಬೇರೆ ದಾರಿಗಳ ಮೂಲಕ ಹಣ ಗಳಿಸ್ತಾರೆ. ಪ್ರತಿಯೊಬ್ಬರಿಗೂ ಅವರ ಕೆಲಸ ಕಠಿಣವೆನಿಸುತ್ತದೆ. ಸುಲಭವಾಗಿ ಕುಳಿತು ಹಣ ಸಂಪಾದನೆ ಮಾಡುವ ಕೆಲಸ ಸಿಕ್ಕಿದ್ದರೆ ಎಂದುಕೊಳ್ತಾರೆ.
ನಿಮಗೆ ಅಚ್ಚರಿಯಾಗ್ಬಹುದು ಆದ್ರೆ ಕುಳಿತು ಸಂಪಾದನೆ ಮಾಡುವ ಕೆಲಸವೂ ಇದೆ. ಆರಾಮವಾಗಿ ಟಿವಿ ಮುಂದೆ ಕುಳಿತು ಕಾರ್ಟೂನ್ ವೀಕ್ಷಣೆ ಮಾಡ್ತಾ 5 ಲಕ್ಷ ರೂಪಾಯಿ ಸಂಪಾದನೆ ಮಾಡ್ಬಹುದು.
ಯಸ್. ಯುನೈಟೆಡ್ ಕಿಂಗ್ಡಮ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ವಾಸಿಸುವ ಅಲೆಕ್ಸಾಂಡರ್ ಟೌನ್ಲಿ ಇದೇ ಜಾಬ್ ಮಾಡ್ತಾರೆ. ಅಲೆಕ್ಸಾಂಡರ್ ಮನೆಯಲ್ಲಿ ಕುಳಿತು ಕಾರ್ಟೂನ್ ಎಪಿಸೋಡ್ ವೀಕ್ಷಣೆ ಮಾಡ್ಬೇಕು. ವಾರದಲ್ಲಿ ಎಲ್ಲ ದಿನ ಎಪಿಸೋಡ್ ನೋಡ್ಬೇಕಾಗಿಲ್ಲ. ಕೆಲ ದಿನ ಮಾತ್ರ ವೀಕ್ಷಣೆ ಮಾಡ್ಬೇಕಾಗುತ್ತದೆ. ದಿನಕ್ಕೆ 30 ಎಪಿಸೋಡ್ ವೀಕ್ಷಣೆ ಮಾಡ್ಬೇಕು. ಅಲೆಕ್ಸಾಂಡರ್ ಗೆ ವರ್ಷಕ್ಕೆ 5 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ. ಇದ್ರ ಜೊತೆ ಕೆಫೆಯಲ್ಲೂ ಅಲೆಕ್ಸಾಂಡರ್ ಕೆಲಸ ಮಾಡ್ತಿದ್ದಾರೆ.
ಕಾರ್ಟೂನ್ ವೀಕ್ಷಣೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಡೋನಟ್ಸ್ ಕಳುಹಿಸಿಕೊಡಲಾಗುತ್ತದೆ. ಪೆನ್ನು-ಪಟ್ಟಿ ಹಿಡಿದು ಅಲೆಕ್ಸಾಂಡರ್ ಕುಳಿತುಕೊಳ್ಳುತ್ತಾರೆ. ಯಾಕೆಂದ್ರೆ ಕಾರ್ಟೂನ್ ಶೋಗಳನ್ನು ಮನರಂಜನೆಗಾಗಿ ವೀಕ್ಷಣೆ ಮಾಡುವುದಿಲ್ಲ. ಬದಲಾಗಿ ಆರಂಭದಿಂದ ಕೊನೆಯವರೆಗೂ ಅದನ್ನು ವೀಕ್ಷಿಸಿ ಅದ್ರ ಬಗ್ಗೆ ವಿಶ್ಲೇಷಣೆ ಮಾಡ್ಬೇಕಾಗುತ್ತದೆ. ಹಾಗಾಗಿ ಪ್ರತಿಯೊಂದನ್ನೂ ಗಮನಿಸಬೇಕಾಗುತ್ತದೆ. ಅಲೆಕ್ಸಾಂಡರ್ ಒಟ್ಟು 717 ಎಪಿಸೋಡ್ ನೋಡಿದ್ರೆ ಸಾಕು.