ಕೀವ್: ಉಕ್ರೇನ್ ನಲ್ಲಿ ರಷ್ಯಾ 6ನೇ ದಿನವೂ ತನ್ನ ಭೀಕರ ಯುದ್ಧ ಮುಂದುವರೆಸಿದ್ದು, ರಾಜಧಾನಿ ಕೀವ್, ಖಾರ್ಕಿವ್ ನಗರಗಳಲ್ಲಿ ಬಾಂಬ್ ಸ್ಫೋಟ, ಗುಂಡಿನ ದಾಳಿ ತೀವ್ರಗೊಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೀವ್ ನಗರದಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.
ಈಗಾಗಲೇ ಕೀವ್ ನಲ್ಲಿರುವ ಉಕ್ರೇನ್ ಸೇನಾ ನೆಲೆಯನ್ನು ಧ್ವಂಸಗೊಳಿಸಿರುವ ರಷ್ಯಾ ಸೇನೆ, ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲು ಮುಂದಾಗಿದೆ. ಅಲ್ಲದೇ ಕೀವ್ ನಲ್ಲಿರುವವರು ಹೊರಗೆ ಹೋಗುವಂತೆ ಸೂಚಿಸಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಕೀವ್ ನಲ್ಲಿರುವ ಭಾರತೀಯರಿಗೆ ಹೇಗಾದರೂ ಮಾಡಿ ಕೀವ್ ನಗರವನ್ನು ತಕ್ಷಣ ತೊರೆದು ಬರುವಂತೆ ತಿಳಿಸಿದೆ.
ಹೊತ್ತಿ ಉರಿದ ಟ್ರಕ್, ವಾಹನದಿಂದ ಹೊರ ಬರಲಾಗದೆ ಸುಟ್ಟು ಕರಕಲಾದ ಚಾಲಕ
ಕೀವ್ ನಗರದಲ್ಲಿ ಪರಿಸ್ಥಿತಿ ಕೈಮೀರಿದ್ದು, ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಹೀಗಾಗಿ ಶೀಘ್ರವಾಗಿ ಭಾರತೀಯರು ಕೀವ್ ನಗರ ಬಿಟ್ಟು ಬರುವಂತೆ ಸಂದೇಶ ರವಾನಿಸಿದೆ.