ಕಾಡಿನ ನಡುವೆ ಹಾದು ಹೋಗುವ ದಾರಿಯಲ್ಲಿ ‘ವನ್ಯಜೀವಿಗಳಿಗೆ ದಾರಿಯ ಮೊದಲ ಹಕ್ಕು’, ಅರಣ್ಯ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂದು ಐಎಫ್‌ಎಸ್ ಅಧಿಕಾರಿ ಮನವಿ ಮಾಡಿದ್ದಾರೆ.
ಈ ರೀತಿ ಮನವಿ ಮಾಡಲು ಕಾರಣವೂ ಇದೆ. ಭಾನುವಾರ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವಾಹನ ಡಿಕ್ಕಿ ಹೊಡೆದು ಗಾಯಗೊಂಡು ಸಾವನ್ನಪ್ಪಿದ ಚಿರತೆಯ ಫೋಟೋ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಅಧಿಕಾರಿ ಅಧಿಕಾರಿ ಮನವಿ ಮಾಡಿದ್ದಾರೆ.
ರಸ್ತೆಗಳು ಮತ್ತು ರೈಲು ಹಳಿಗಳನ್ನು ದಾಟುವ ಪ್ರಯತ್ನದಲ್ಲಿ ವಾಹನಗಳು ಡಿಕ್ಕಿ ಹೊಡೆದ ನಂತರ ಅನೇಕ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಸಾಯುತ್ತವೆ. ಈ ವರ್ಷದ ಜನವರಿಯಲ್ಲಿ ಹರಿಯಾಣದ ನುಹ್‌ನಲ್ಲಿ ವೆಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದ ಎರಡು ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿತ್ತು.
ವನ್ಯಜೀವಿ ಕಾರಿಡಾರ್‌ಗಳನ್ನು ಅಂಡರ್‌ಪಾಸ್ ಅಥವಾ ಓವರ್‌ಪಾಸ್ ರೂಪದಲ್ಲಿ ಮಾಡಬಹುದು, ಇದರಿಂದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳು ಹಾದುಹೋಗಲು ವಾಹನ ದಟ್ಟಣೆಯ ಸಂಪರ್ಕಕ್ಕೆ ಬರುವುದಿಲ್ಲ ಎಂಬ ಅಭಿಪ್ರಾಯ ಪರಿಸರವಾದಿಗಳಲ್ಲಿ ದಟ್ಟವಾಗಿದೆ.