
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಕೆಲವರು ರಷ್ಯಾ ಪರವಾದರೆ ಇನ್ನು ಕೆಲವರು ಉಕ್ರೇನ್ ಪರ.
ಇದೀಗ ಉಕ್ರೇನಿಯನ್ ರೈತನೊಬ್ಬ ರಷ್ಯಾದ ಮಿಲಿಟರಿ ಟ್ಯಾಂಕ್ ಅನ್ನು ಎಳೆದುಕೊಂಡು ಹೋಗುವ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರಿಗೆ ಖುಷಿಕೊಟ್ಟಿದೆ.
BIG NEWS: ಡ್ರಗ್ಸ್ ಪ್ರಕರಣ; ಹಲವರಿಗೆ ಕೂದಲು ಟೆಸ್ಟ್ ಮಾಡಿಲ್ಲ ಯಾಕೆ…? ರಾಜಕೀಯ ಒತ್ತಡಕ್ಕೆ ಮಣಿದ ಸಿಸಿಬಿ; ಇಂದ್ರಜಿತ್ ಲಂಕೇಶ್ ವಾಗ್ದಾಳಿ
ರಷ್ಯಾದ ಶಸ್ತ್ರಸಜ್ಜಿತ ಟ್ರ್ಯಾಕ್ಡ್ ವಾಹನದಂತೆ ಕಾಣುವ ವಾಹನವನ್ನು ರೈತನು ಟ್ರಾಕ್ಟರ್ ಮೂಲಕ ಟೋ ಮಾಡುವುದನ್ನು ಇನ್ನೊಬ್ಬರು ಖುಷಿಯಿಂದ ವಿಡಿಯೋ ಮಾಡಿಕೊಂಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ, ಬ್ರಿಟಿಷ್ ಸಂಸದ ಜಾನಿ ಮರ್ಸರ್ ಅವರು ಟ್ವೀಟ್ ಮಾಡಿ ಉಕ್ರೇನಿಯನ್ ಟ್ರಾಕ್ಟರ್ ಇಂದು ರಷ್ಯಾದ ಎಪಿಸಿಯನ್ನು ಕದಿಯುತ್ತದೆ ಎಂದು ಹಾಸ್ಯ ಮಾಡಿದ್ದಾರೆ.
ರಷ್ಯಾದಿಂದ ವ್ಯವಸ್ಥೆ ಹದಗೆಟ್ಟಿದ್ದು, ಹಲವಾರು ಟ್ಯಾಂಕರ್‌ಗಳ ಇಂಧನ ಖಾಲಿಯಾಗಿವೆ ಮತ್ತು ಸೈನಿಕರು ಸರಬರಾಜು ಸಂಪರ್ಕಕ್ಕೆ ಸಿಗದೇ ಸಂವಹನ ಕಡಿತಗೊಂಡಿದ್ದು, ಹೀಗಾಗಿ ಟ್ಯಾಂಕರ್‌ಗಳು ಜನರ ಕೈಗೆ ಸಿಗುತ್ತಿದೆ ಎಂದು ವ್ಯಕ್ತಿಯೊಬ್ಬರು ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.
Netizens cheer as video of Ukrainian farmer ‘stealing’ Russian tank surfaces online