ರಷ್ಯಾ –ಉಕ್ರೇನ್ ಸಂಘರ್ಷದ ನಡುವೆ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಭಾರತೀಯರನ್ನು ಆಪರೇಷನ್ ಗಂಗಾ ಮೂಲಕ ಏರ್ ಲಿಫ್ಟ್ ಮಾಡಲಾಗಿದೆ. ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿ ಭಾರತ ಮಾದರಿ ಕಾರ್ಯ ಕೈಗೊಂಡಿದೆ.
ಆದರೆ, ಅಮೆರಿಕ ಇದಕ್ಕೆ ವ್ಯತಿರಿಕ್ತ ನಿರ್ಧಾರ ಕೈಗೊಂಡಿದೆ. ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದು ತನ್ನ ದೇಶದ ನಾಗರಿಕರಿಗೆ ಅಮೆರಿಕ ಸಲಹೆ ನೀಡಿದೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರ ಹೊಣೆ ತನ್ನದಲ್ಲ ಎಂದು ಅಮೆರಿಕ ಪರೋಕ್ಷವಾಗಿ ಹೇಳಿದೆ.
ಸುರಕ್ಷಿತ ಎನಿಸುವ ಮಾರ್ಗ ಮತ್ತು ಅಪಾಯದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಅವಕಾಶಗಳನ್ನು ಬಳಸಿಕೊಂಡು ಹೊರಬನ್ನಿ ಎಂದು ಉಕ್ರೇನ್ ನಲ್ಲಿರುವ ತನ್ನ ದೇಶದ ನಾಗರಿಕರಿಗೆ ಅಮೆರಿಕ ಸರ್ಕಾರ ಸಲಹೆ ನೀಡಿದೆ.