ದೆಹಲಿ: ತಳ ಮಟ್ಟದಿಂದ ಮೇಲೆ ಬರಬೇಕಿದ್ದರೆ, ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟ, ಸವಾಲನ್ನು ಎದುರಿಸಬೇಕಾಗುತ್ತದೆ. ಜೀವನ ಅನ್ನೋದು ಹೂವಿನ ಹಾಸಿಗೆಯಲ್ಲ. ಕಲ್ಲು-ಮುಳ್ಳಿನ ದಾರಿಯನ್ನು ದಾಟಿ ಮುಂದೆ ಬಂದ್ರೆ ಮಾತ್ರ ಜೀವನದಲ್ಲಿ ಏನನ್ನಾದ್ರೂ ಸಾಧಿಸಬಹುದು. ಇದಕ್ಕೆ ಉದಾಹರಣೆಯೆಂಬಂತೆ ದೆಹಲಿಯ ಈ ಮಹಿಳೆಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಪುಟ್ಟ ಹೋಟೆಲ್ ಅನ್ನು ಮುನ್ನಡೆಸುತ್ತಿರುವ ಮಹಿಳೆಯು ತನ್ನ ದಿವಂಗತ ಗಂಡನ ಕನಸನ್ನು ನನಸಾಗಿಸಿದ್ದಾಳೆ. ಈಕೆಯ ಸ್ಟಾಲ್ಗೆ ಭೇಟಿ ನೀಡಿದ ಆಹಾರ ಬ್ಲಾಗರ್ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದು 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ವೈರಲ್ ಆಗಿರುವ ವಿಡಿಯೋ ಚಂಪಾರಣ್ ನಾನ್ ವೆಜ್ ಫುಡ್ ಸ್ಟಾಲ್ ಕಥೆಯನ್ನು ಹೇಳುತ್ತದೆ. ಈ ಫುಡ್ ಸ್ಟಾಲ್ ಹೇಗೆ ಹುಟ್ಟಿಕೊಂಡಿತು? ಪ್ರಸ್ತುತ ಅದನ್ನು ಯಾರು ನಡೆಸುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ವಿಶಿಷ್ಟ ಶೈಲಿಯಲ್ಲಿ ಮಾಂಸದಡುಗೆಯನ್ನು ತಯಾರಿಸುತ್ತಿದ್ದಾರೆ.
ಮಹಿಳೆಯ ಪತಿ ಚಂಪಾರಣ್ ಈ ವಿಶಿಷ್ಟ ಮಾಂಸದಡುಗೆಯನ್ನು ಪರಿಚಯಿಸಿದ್ದರು. ಆದರೆ ದುರಾದೃಷ್ಟವಶಾತ್, ಸ್ಟಾಲ್ ತೆರೆದ ಕೇವಲ ಒಂದು ವಾರವಾಗಿತ್ತಷ್ಟೇ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಪತಿಯ ಮರಣದ ಬಳಿಕ ಧೃತಿಗೆಡದ ಪತ್ನಿ ತನ್ನ ಗಂಡನ ಕನಸನ್ನು ಸಾಕಾರಗೊಳಿಸುವಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಮಹಿಳೆಯ ಮನೋಸ್ಥೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/H0lywMxcNSA