ನಾಳೆ ಮಹಾಶಿವನನ್ನು ಆಚರಿಸುವ ಮಹಾಶಿವರಾತ್ರಿ ಹಬ್ಬ. ದೇಶದಾದ್ಯಂತ ಈ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂತಹ ಪವಿತ್ರ ದಿನದಂದು, ಬೆಂಗಳೂರಿನಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಏರಲಾಗಿದೆ.
ಹೌದು, ನಾಳೆ ಮಹಾಶಿವರಾತ್ರಿ ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ಎರಡಕ್ಕೂ ನಿಷೇಧ ಹೇರಿದೆ.
ನಾಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳಲ್ಲಾಗಲಿ ಅಥವಾ ಮಾರಾಟ ಮಳಿಗೆಗಳಂತ ಇತರ ಪ್ರದೇಶಗಳಲ್ಲಿ ಆಗಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಈ ಸಂಬಂಧ ಪಾಲಿಕೆ ಆದೇಶ ಹೊರಡಿಸಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಹಿತಿ ನೀಡಿದ್ದಾರೆ.
ಇನ್ನು ನಗರದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಇಂದಿನಿಂದಲೇ ಶುರುವಾಗಿದ್ದು, ಎಲ್ಲಾ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಕೊರೋನಾ ನಿರ್ಬಂಧಗಳಿಲ್ಲದೇ ಶಿವರಾತ್ರಿ ಹಬ್ಬವನ್ನು ಆಚರಿಸಲು ಬೆಂಗಳೂರಿಗರು ಕಾತುರರಾಗಿದ್ದು, ಸಂಭ್ರಮಾಚರಣೆಗೆ ಸಂಭ್ರಮದಿಂದ ಸಜ್ಜಾಗಿದ್ದಾರೆ.