ಫೆಬ್ರವರಿ 24ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ವಿರುದ್ಧ ಯುದ್ಧ ಘೋಷಣೆಯನ್ನು ಮಾಡಿದ್ದ ಸಂದರ್ಭದಲ್ಲಿ ಉಕ್ರೇನ್ನ ಎಂಪಿ ವೊಲೊಡಿಮಿರ್ ಅರಿವ್ ಉಕ್ರೇನ್ ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಎಲ್ಲವನ್ನೂ ಮಾಡುತ್ತದೆ ಎಂದು ಹೇಳಿದ್ದರು. ಅಲ್ಲದೇ ರಷ್ಯಾದ ಮಿಲಿಟರಿ ಪಡೆಗಳಿಗೆ ನರಕಕ್ಕೆ ಸುಸ್ವಾಗತ ಎಂದೂ ಹೇಳಿದ್ದರು. ರಷ್ಯಾಗಿಂತ ಕಡಿಮೆ ಸೇನಾಬಲವನ್ನು ಹೊಂದಿದ್ದರೂ ಸಹ ತನ್ನ ಪ್ರಯತ್ನವನ್ನು ಬಿಡದ ಉಕ್ರೇನ್ ರಷ್ಯಾದ ಸೇನೆಗೆ ನರಕದ ಹಾದಿಯನ್ನು ಸಾಧ್ಯವಾದಷ್ಟು ತೋರಿಸಲು ಪ್ರಯತ್ನಿಸುತ್ತಿದೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಆದಷ್ಟು ವಿಳಂಬಗೊಳಿಸಲು ಹಾಗೂ ರಷ್ಯಾದವರನ್ನು ಅವಹೇಳನ ಮಾಡುವ ಸಲುವಾಗಿ ರಸ್ತೆಯ ಸಂಕೇತಗಳು ಇರಬೇಕಾದ ಜಾಗಗಳಲ್ಲಿ Go F*** Yourselves ಎಂದು ಅವಾಚ್ಯ ಶಬ್ದಗಳನ್ನು ಬರೆಯಲಾಗಿದೆ.
ಉಕ್ರೇನಿಯನ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಉಕ್ರಾವ್ಟೋಡರ್ ಫೇಸ್ಬುಕ್ ಪೋಸ್ಟ್ಗಳಲ್ಲಿ ದೇಶದ ರಸ್ತೆಯ ಚಿಹ್ನೆಗಳನ್ನು ಕಿತ್ತು ಹಾಕುವುದು ಮೊದಲ ಆದ್ಯತೆ ಎಂದು ಹೇಳಿದೆ. ಶತ್ರುಗಳು ಕರುಣಾಜನಕ ಸ್ಥಿತಿಯನ್ನು ತಲುಪಬೇಕು. ಅವರು ನೇರವಾಗಿ ನರಕಕ್ಕೆ ಹೋಗಲು ಸಹಾಯ ಮಾಡೋಣ ಎಂದು ಬರೆಯಲಾಗಿದೆ. ಅಲ್ಲದೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾದ ರಸ್ತೆಯ ಚಿಹ್ನೆಗಳ ಫೋಟೋಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವುದನ್ನು ಕಾಣಬಹುದಾಗಿದೆ.
ರಷ್ಯಾದ ಸೇನೆಯನ್ನು ಗೊಂದಲಕ್ಕೊಳಪಡಿಸಲು ಉಕ್ರೇನ್ನ ಸೈನಿಕರು ರಸ್ತೆ ಚಿಹ್ನೆಗಳು ಹಾಗೂ ದಿಕ್ಕುಗಳು ಇದ್ದ ಫಲಕಗಳನ್ನು ಕಿತ್ತು ಹಾಕುತ್ತಿದ್ದಾರೆ. ಅಲ್ಲದೇ ಈ ಜಾಗಗಳಲ್ಲಿ ರಷ್ಯಾದ ಸೇನೆಯನ್ನು ಅವಾಚ್ಯವಾಗಿ ನಿಂದಿಸುವಂತಹ ಬೋರ್ಡ್ಗಳನ್ನು ಹಾಕಲಾಗಿದೆ.