ಈಗಾಗ್ಲೇ ಭಾರತದೆಲ್ಲೆಡೆ ಐಪಿಎಲ್ ಫೀವರ್ ಶುರುವಾಗಿದೆ. ಈ ಬಾರಿ ಎರಡು ಹೊಸ ತಂಡಗಳು, ಐಪಿಎಲ್ ಅಂಗಳಕ್ಕೆ ಕಾಲಿಟ್ಟಿದ್ದು ಡಬಲ್ ಧಮಾಕ ಪಕ್ಕಾ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೊಸ ತಂಡಗಳು ಸೇರಿದಂತೆ ಎಲ್ಲಾ ಫ್ರಾಂಚೈಸಿಗಳು ತಮ್ಮ ನಾಯಕನ ಹೆಸರನ್ನು ಘೋಷಿಸಿವೆ. ಆದರೆ
RCB ಮಾತ್ರ ಇದುವರೆಗು ತನ್ನ ನಾಯಕ ಯಾರೆಂದು ಹೆಸರಿಸಿಲ್ಲ.
ಇಂದು ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ಮಯಾಂಕ್ ಅಗರ್ವಾಲ್ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ಹೆಸರಿಸಿದೆ. ಇದರ ನಂತರ ಕ್ರಿಕೆಟ್ ದುನಿಯಾ ಹಾಗೂ ಅಭಿಮಾನಿಗಳಲ್ಲಿ, RCB ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಇನ್ಮುಂದೆ ವಿರಾಟ್ RCB ತಂಡದ ನಾಯಕನಾಗಿರುವುದಿಲ್ಲ ಎಂಬ ಬೇಸರ ಇದ್ದೆ ಇದೇ, ಅದರ ಜೊತೆಗೆ ಕಿಂಗ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬ ಕುತೂಹಲವು ಇದೆ.
BIG NEWS: ಇದನ್ನೆಲ್ಲ ಸಿದ್ದರಾಮಯ್ಯ ತಂದೆ ನೋಡಿದ್ರೆ ‘ಸಿದ್ದರಾಮಯ್ಯ’ ಎಂದು ಹೆಸರಿಡುತ್ತಿರಲಿಲ್ಲ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ. ರವಿ ವಾಗ್ದಾಳಿ
RCB ತಂಡವು ಶೀಘ್ರದಲ್ಲೇ ತನ್ನ ನಾಯಕನ ಘೋಷಣೆ ಮಾಡಲಿದೆ ಎಂದು ಇನ್ಸೈಡ್ಸ್ಪೋರ್ಟ್ಸ್ ವರದಿ ಮಾಡಿದೆ. ಸಂಜಯ್, ಮೈಕ್ ಹಾಗೂ ತಂಡದ ಮಾಲೀಕರು ಈ ಬಗ್ಗೆ ಸಭೆ ನಡೆಸಿದ್ದಾರೆ. ಆದಷ್ಟು ಬೇಗ ನಿಮ್ಮ ಮುಂದೆ RCB ತಂಡದ ನಾಯನಾರು ಎಂಬುದು ತಿಳಿಯಲಿದೆ ಎಂದು, ತಂಡಕ್ಕೆ ಹತ್ತಿರವಿರುವ ಮೂಲದಿಂದ ತಿಳಿದು ಬಂದಿದೆ.
ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ಮೂವರನ್ನು RCB ತಂಡದ ಕ್ಯಾಪ್ಟನ್ ಮೆಟೀರಿಯಲ್ ಎನ್ನಲಾಗುತ್ತಿದೆ. ಆದರೆ, ಇವರಲ್ಲಿ ಯಾರನ್ನಾದರು ಆಯ್ಕರ ಮಾಡಿದಾಗ RCBಗೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು ಎಂದು ಉನ್ನತ ಮೂಲಗಳು ಸುಳಿವು ಬಿಟ್ಟುಕೊಟ್ಟಿವೆ.
ತಂಡಕ್ಕೆ ಸಾಕಷ್ಟು ಆಯ್ಕೆಗಳಿವೆ ಮತ್ತು ಇರುವ ಎಲ್ಲರೂ ಸಮರ್ಥ ನಾಯಕರಾಗಿದ್ದಾರೆ. ದಿನೇಶ್ಗೆ ವಿರಾಟ್ ಕೊಹ್ಲಿ ಮತ್ತು RCB ತಂಡದ ಬಗ್ಗೆ ಚೆನ್ನಾಗಿ ಗೊತ್ತು. ಮ್ಯಾಕ್ಸ್ ವೆಲ್ ಈಗ ಒಂದು ವರ್ಷದಿಂದ ನಮ್ಮೊಂದಿಗೆ ಇದ್ದಾರೆ. ಫಾಫ್ ದಕ್ಷಿಣ ಆಫ್ರಿಕಾದ ಅದ್ಭುತ ನಾಯಕರಾಗಿದ್ದರು. ಈ ಎಲ್ಲಾ ಅಂಶಗಳನ್ನು ಅಳೆದು ತೂಗಿ ತಂಡಕ್ಕೆ ಯಾರು ಉತ್ತಮ ಎನ್ನುವುದನ್ನ ನಿರ್ಧರಿಸಬೇಕು ಎಂದು RCB ಮೂಲಗಳು ತಿಳಿಸಿವೆ.