alex Certify ಇಲ್ಲಿ ಕೇವಲ 2.50 ರೂಪಾಯಿಗೆ ಸಿಗುತ್ತೆ ಬಿಸಿ ಬಿಸಿ ಸಮೋಸಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಕೇವಲ 2.50 ರೂಪಾಯಿಗೆ ಸಿಗುತ್ತೆ ಬಿಸಿ ಬಿಸಿ ಸಮೋಸಾ..!

ಸಮೋಸಾ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ ? ಬಿಸಿ ಬಿಸಿ ಸಮೋಸಾ ಜೊತೆಗೆ ಚಹಾ ಇದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ ಅಂತಾರೆ ತಿಂಡಿ ಪ್ರಿಯರು. ಕಳೆದ ಕೆಲ ವರ್ಷಗಳಿಂದೀಚೆಗೆ ಸಮೋಸಾ ಕೂಡ ದುಬಾರಿಯಾಗಿಬಿಟ್ಟಿದೆ. ಕಡಿಮೆ ಅಂದ್ರೂ ಈಗ ಒಂದು ಸಮೋಸಾ ಬೆಲೆ 15-20 ರೂಪಾಯಿ.

ಆದ್ರೆ ಅಮೃತಸರದಲ್ಲೊಬ್ಬ 75ರ ಹರೆಯದ ವೃದ್ಧ ಅತಿ ಕಡಿಮೆ ಬೆಲೆಗೆ ಸಮೋಸಾ ಮಾರಾಟ ಮಾಡ್ತಿದ್ದಾನೆ. ಅಮೃತಸರದ ಮಹಾನಾ ರೋಡ್‌ ನಲ್ಲಿ ಪುಟ್ಟದೊಂದು ಅಂಗಡಿಯಿದೆ. ಅಲ್ಲಿ ಸಮೋಸಾ ಮಾಡಿ ಬದುಕು ಸಾಗಿಸ್ತಿದ್ದಾನೆ ಈ ವೃದ್ಧ.

ಒಂದು ಸಮೋಸಾ ಬೆಲೆ ಕೇವಲ 2.50 ರೂಪಾಯಿ. ಇಷ್ಟು ಅಗ್ಗದ ಬೆಲೆಗೆ ಸಮೋಸಾ ಮಾರಾಟ ಮಾಡ್ತಿರೋದ್ರಿಂದ ಆತನಿಗೆ ಲಾಭವೂ ಕಡಿಮೆ. ಆದ್ರೂ ಈ ಇಳಿವಯಸ್ಸಿನಲ್ಲೂ ದುಡಿದು ತಿನ್ನುವ ಹಂಬಲ ಆತನಿಗಿದೆ. ಫುಡ್‌ ಬ್ಲಾಗರ್‌ ಒಬ್ಬರು 2.50 ರೂಪಾಯಿಗೆ ಸಮೋಸಾ ಮಾರ್ತಿರೋ ವೃದ್ಧನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

https://youtu.be/aI2b8Irf1HY

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...