ಗದಗ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆಗೆ ಕಿಡಿಕಾರಿರುವ ಸಚಿವ ಬಿ.ಸಿ.ಪಾಟೀಲ್, ಇದು ಕಾಂಗ್ರೆಸ್ ನಾಯಕರ ಮತ್ತೊಂದು ನಾಟಕ ಎಂದು ಹೇಳಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ವಿಧಾನಸೌಧದಲ್ಲಿ ಕಾಂಗ್ರೆಸ್ ಮೂರು ದಿನ ನಿದ್ದೆ ಮಾಡಿದೆ. ಜನ ಛಿ ಥೂ ಎನ್ನುತ್ತಿದ್ದಾರೆ. ಆದರೂ ಎಚ್ಚಿತ್ತುಕೊಂಡಿಲ್ಲ. 6 ದಿನಗಳ ಕಾಲ ಕಲಾಪವನ್ನು ಹಾಳು ಮಾಡಿದ್ದಾರೆ. ಗದ್ದಲ-ಗಲಾಟೆ ನಡೆಸಿ ಯಾವುದೇ ಚರ್ಚೆ ನಡೆಸಲು ಬಿಟ್ಟಿಲ್ಲ ಯಾವ ಪುರುಷಾರ್ಥಕ್ಕಾಗಿ ಹಾಗೆ ನಡೆದುಕೊಂಡರು ಎಂಬುದು ಗೊತ್ತಿಲ್ಲ. ಈಗ ಪಾದಯಾತ್ರೆ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
BIG NEWS: ಅಪಘಾತಕ್ಕೀಡಾದ ಕುಟುಂಬಗಳಿಗೆ ಪರಿಹಾರ ಹೆಚ್ಚಿಸಿದ ಕೇಂದ್ರ….!
ಬಿಜೆಪಿ ಯಾವತ್ತೂ ಮೇಕೆದಾಟು ಯೋಜನೆಗೆ ವಿರೋಧ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಪರಿಸರ ಇಲಾಖೆಯಿಂದ ಕ್ಲಿಯರನ್ಸ್ ಸಿಕ್ಕ ಬಳಿಕ ಯೋಜನೆ ಆರಂಭವಾಗುತ್ತೆ. ಹೀಗಿರುವಾಗ ಕಾಂಗ್ರೆಸ್ ನಾಯಕರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ? ಯಾರ ವಿರುದ್ಧ ಹೋರಾಟ ನಡೆಸಿದ್ದಾರೆ. ಅನಗತ್ಯವಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದರು.