ಉಕ್ರೇನ್ನ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿರುವ ಅಮೆರಿಕ ಹಾಗೂ ಕೆನಡಾದ ಸಾಕಷ್ಟು ರಾಜ್ಯಗಳು ರಷ್ಯಾ ನಿರ್ಮಿತ ವೋಡ್ಕಾ ಹಾಗೂ ಡಿಸ್ಟಿಲ್ಡ್ ಸ್ಪಿರಿಟ್ಗಳ ಮಾರಾಟಕ್ಕೆ ನಿರ್ಬಂಧವನ್ನು ಹೇರಿವೆ.
ಅಮೆರಿಕದ ರಾಜ್ಯವಾದ ನ್ಯೂ ಹ್ಯಾಂಪ್ಶೈರ್ನಲ್ಲಿ ಗರ್ವನರ್ ಕ್ರಿಸ್ ಸುನುನು ರಷ್ಯಾ ನಿರ್ಮಿತ ವೈನ್ಗಳನ್ನು ಸರ್ಕಾರಿ ಮದ್ಯದ ಮಳಿಗೆಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಓಹಿಯೋದಲ್ಲಿರುವ ಗವರ್ನರ್ ಕೂಡ ರಷ್ಯಾ ಬ್ರ್ಯಾಂಡ್ನ ಮದ್ಯಗಳ ಮಾರಾಟ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಇತ್ತ ಕೆನಡಾದ ಮದ್ಯದಂಗಡಿಗಳೂ ಕೂಡ ಮಾಸ್ಕೋದ ಉಕ್ರೇನ್ ಆಕ್ರಮಣವನ್ನು ಖಂಡಿಸುತ್ತಾ ರಷ್ಯಾದ ವೋಡ್ಕಾ ಹಾಗೂ ಇತರೆ ರಷ್ಯಾ ನಿರ್ಮಿತ ಮದ್ಯಪಾನಗಳನ್ನು ಕಿತ್ತೆಸೆದಿವೆ.
ಮ್ಯಾನಿಟೋಬಾ ಹಾಗೂ ನ್ಯೂಫೌಂಡ್ಲ್ಯಾಂಡ್ ಪ್ರಾಂತ್ಯಗಳಲ್ಲಿ ರಷ್ಯಾದ ಮದ್ಯಗಳಿಗೆ ಮದ್ಯದಂಗಡಿಗಳಿಂದ ಕೊಕ್ ನೀಡಲಾಗಿದೆ. ಕೆನಡಾದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಒಂಟಾರಿಯೋದಲ್ಲಿಯೂ ರಷ್ಯಾದ ಎಲ್ಲಾ ಉತ್ಪನ್ನಗಳನ್ನು ಅಂಗಡಿಯಿಂದ ತೆಗೆದು ಹಾಕುವಂತೆ ಒಂಟಾರಿಯೊದ ಮದ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ ಎನ್ನಲಾಗಿದೆ.