ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ಮೇಲೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಯುದ್ಧ ಎದುರಿಸುವ ತಮ್ಮ ನಡವಳಿಕೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ.
ಈ ಮಧ್ಯೆಯೇ ಅವರ ಹಳೆಯ ವಿಡಿಯೋ ಮುನ್ನೆಲೆಗೆ ಬಂದಿದೆ. 2006ರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದಾಗ ಝೆಲೆನ್ಸ್ಕಿ ಬಹಳ ಜನಪ್ರಿಯರಾಗಿ ಕಾಣಿಸಿದ್ದರು. ಅವರು ಡ್ಯಾನ್ಸಿಂಗ್ ವಿಥ್ ದಿ ಸ್ಟಾರ್ಸ್ ವೇದಿಕೆಯಲ್ಲಿ ಪ್ರದರ್ಶನ ನೀಡಿದ ಎಡಿಟೆಡ್ ವೀಡಿಯೊ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
BREAKING NEWS: ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ನಿಧನ
ಆ ಕ್ಲಿಪ್‌ನಲ್ಲಿ ಅವರ ಡ್ಯಾನ್ಸ್ ಪಾರ್ಟ್‌ನರ್ ಒಲೆನಾ ಶಾಪ್ಟೆಂಕೊ ಜೊತೆಗೆ ಪ್ರದರ್ಶನ ನೀಡಿ ಎಲ್ಲರನ್ನೂ ಬೆರಗುಗೊಳಿಸುವುದನ್ನು ಕಾಣಬಹುದು. ಪ್ರದರ್ಶನದ ಪ್ರಪ್ರಥಮ ಋತುವಿನಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗಿತ್ತು.
ಆನ್‌ಲೈನ್‌ನಲ್ಲಿ ಈ ಕ್ಲಿಪ್ ಹಂಚಿಕೊಂಡ ನಂತರ 1 ಮಿಲಿಯನ್ ವೀಕ್ಷಣೆಯಾಯಿತು. ನೆಟ್ಟಿಗರು ತಮ್ಮ ಅಭಿಪ್ರಾಯದೊಂದಿಗೆ ವಿಡಿಯೋ ಶೇರ್ ಮಾಡುತ್ತಲೇ ಇದ್ದಾರೆ.
https://twitter.com/abughazalehkat/status/1497768813860896770?ref_src=twsrc%5Etfw%7Ctwcamp%5Etweetembed%7Ctwterm%5E1497768813860896770%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fold-video-of-president-volodymyr-zelenskyy-from-dancing-with-the-stars-goes-viral-amid-russia-ukraine-crisis-watch-1918440-2022-02-27