ಕೋವಿಡ್ ಸಮಯದಲ್ಲಿ ಭವರವಸೆಯ ಬೆಳಕಾಗಿದ್ದ ವಿಶ್ವದ ಅತಿ ದೊಡ್ಡ ವಿಮಾನವನ್ನೇ ರಷ್ಯಾ ಧ್ವಂಸ ಮಾಡಿದೆ. ಈ ವಿಮಾನ ಕೊರೊನಾ ಸಮಯದಲ್ಲಿ ಲಸಿಕೆ ಹಾಗೂ ಪಿಪಿಇ ಕಿಟ್ ಗಳನ್ನು ಹಲವು ರಾಷ್ಟ್ರಗಳಿಗೆ ಪೂರೈಕೆ ಮಾಡಿತ್ತು.
84 ಮೀಟರ್ ಉದ್ದದ ಈ ವಿಮಾನ 250 ಟನ್ ತೂಕದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 850 ಕಿಮೀ ವೇಗದಲ್ಲಿ ಇದು ಹಾರಬಲ್ಲದು. ಹಾಗಾಗಿಯೇ ಈ ವಿಮಾನಕ್ಕೆ ಸಿಂಬಲ್ ಆಫ್ ಡ್ರೀಮ್ಸ್ ಎಂದು ಉಕ್ರೇನ್ ಹೆಸರಿಟ್ಟಿತ್ತು.
ಈ ವಿಮಾನವನ್ನು ಪುಡಿಗಟ್ಟಿರೋ ರಷ್ಯಾ ವಿರುದ್ಧ ಉಕ್ರೇನ್ ಕೆಂಡ ಕಾರಿದೆ. ವಿಮಾನವನ್ನು ಧ್ವಂಸ ಮಾಡಿದ್ರೂ ನಮ್ಮ ಕನಸುಗಳನ್ನು ಕೊಲ್ಲಲು ಸಾಧ್ಯವಿಲ್ಲ ಅಂತಾ ಹೇಳಿದೆ. ಸ್ವತಂತ್ರ, ಅತ್ಯಂತ ಬಲಶಾಲಿ ಹಾಗೂ ಪ್ರಜಾಸತ್ತಾತ್ಮಕ ಯುರೋಪಿಯನ್ ದೇಶ ನಮ್ಮದು ಅಂತಾ ಉಕ್ರೇನ್ ಗುಡುಗಿದೆ.
ರಷ್ಯಾ ಧ್ವಂಸ ಮಾಡಿರೋ ಎಎನ್-225 ಮ್ರಿಯಾ ವಿಮಾನ 2020ರಲ್ಲಿ ಕಾರ್ಯಾರಂಭ ಮಾಡಿತ್ತು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವಕ್ಕೇ ಹೆಗಲು ಕೊಟ್ಟಿದ್ದ ವಿಮಾನವನ್ನೇ ರಷ್ಯಾ ನಾಶ ಮಾಡಿರೋದು ತೀವ್ರ ಟೀಕೆಗೆ ಗುರಿಯಾಗಿದೆ.
ಈ ವಿಮಾನವನ್ನು ನಿರ್ಮಿಸಲು ಸುಮಾರು 3 ಬಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಲಾಗಿತ್ತು. ಇದೀಗ ವಿಮಾನವನ್ನೇ ಪುಡಿಗಟ್ಟಿರುವ ರಷ್ಯಾ ಆ ಹಣವನ್ನು ಭರಿಸಬೇಕೆಂದು ಸಹ ಉಕ್ರೇನ್ ಒತ್ತಾಯಿಸಿದೆ.