ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ ವ್ಲಾಡಿಮಿರ್ ಪುಟಿನ್ ಅವರನ್ನು ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿದೆ
ವ್ಲಾಡಿಮಿರ್ ಪುಟಿನ್ ಅವರು ವಿಶ್ವ ಕ್ರೀಡೆಗಳಲ್ಲಿ ಅತ್ಯಂತ ಹಿರಿಯ ಅಧಿಕೃತ ಸ್ಥಾನವನ್ನು ತಾತ್ಕಾಲಿಕವಾಗಿ ಕಳೆದುಕೊಂಡರು. ಪುಟಿನ್ ಅವರ ಗೌರವಾಧ್ಯಕ್ಷ ಸ್ಥಾನಮಾನವನ್ನು ಅಮಾನತುಗೊಳಿಸಿದ್ದಕ್ಕಾಗಿ ಇಂಟರ್ನ್ಯಾಷನಲ್ ಜೂಡೋ ಫೆಡರೇಶನ್ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಕಾರಣವೆನ್ನುವುದನ್ನು ಉಲ್ಲೇಖಿಸಿದೆ.
ರಷ್ಯಾದ ಅಧ್ಯಕ್ಷರು ಜುಡೋದಲ್ಲಿ ಆಸಕ್ತಿ ಹೊಂದಿದ್ದು, 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಗುರುವಾರ ಪುಟಿನ್ ಆದೇಶಿಸಿದ ಉಕ್ರೇನ್ ನ ಆಕ್ರಮಣದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.