ಸಾಮಾಜಿಕ ಜಾಲತಾಣದ ಬಗ್ಗೆ ಸಮಾಜದಲ್ಲಿ ನೂರೆಂಟು ಆಕ್ಷೇಪಗಳು ಉಂಟು. ಹಾಗೆಯೇ ಒಳಿತೂ ಕೂಡ ಇದೆ.
ಟಿಕ್‌ಟಾಕ್‌ನಲ್ಲಿ ತನ್ನ ಜೀವನದ ಹೋರಾಟಗಳನ್ನು ಹಂಚಿಕೊಂಡ ನಂತರ ಮಹಿಳೆ ನೆರವಿಗೆ ಬಂದ ಅಪರಿಚಿತ ವ್ಯಕ್ತಿ ಆಕೆಗೆ ವ್ಯಕ್ತಿ ಉದ್ಯೋಗ ಕೊಡಿಸಿ, ಲ್ಯಾಪ್‌ಅಪ್ ನೀಡಿರುವ ಅಚ್ಚರಿಯ ಪ್ರಸಂಗ ಯುಎಸ್‌ನಲ್ಲಿ ನಡೆದಿದೆ.
ನ್ಯೂಯಾರ್ಕ್‌ನಲ್ಲಿ ವಾಸಿಸುವ 27 ವರ್ಷದ ಕರ್ಟ್ನಿ ಎಂಬಾಕೆ ಈ ಸಂಗತಿ ಹಂಚಿಕೊಂಡಿದ್ದಾರೆ. ಆಕೆ ಮತ್ತು ಅವಳ ಸಂಗಾತಿ ಇಬ್ಬರೂ ಒಂದೇ ವಾರದಲ್ಲಿ ತಮ್ಮ ಕೆಲಸ ಕಳೆದುಕೊಂಡರು ವಾಸಿಸಲು ಸ್ಥಳವಿಲ್ಲದೆ, ಆಕೆಯ ಸಹೋದರಿಯೊಂದಿಗೆ ತೆರಳಿದರು. ಆದರೆ ಅಲ್ಲಿ ಸರಿ ಬಾರದೇ ರಸ್ತೆಗೆ ಬರಬೇಕಾಯಿತು.
ಕರ್ಟ್ನಿ ತನ್ನ ಕಷ್ಟಗಳನ್ನು ತನ್ನ ಟಿಕ್‌ಟಾಕ್ ಖಾತೆಯಲ್ಲಿನ ವೀಡಿಯೊಗಳ ಮೂಲಕ ಹಂಚಿಕೊಂಡಿದ್ದು, ಇರಲು ಮನೆ ಇಲ್ಲದೇ ದಂಪತಿ ಉದ್ಯಾನವನಗಳಲ್ಲಿ ಮಲಗಿದ್ದರಂತೆ.
‘ಮನ್ ಕಿ ಬಾತ್’ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪ್ರಸ್ತಾಪಿಸಿದ ಮೋದಿ
ಅಕೆಯ ಪ್ರಯತ್ನಗಳು ಅಂತಿಮವಾಗಿ ಫಲ ನೀಡಿತು, ನ್ಯೂಯಾರ್ಕರ್ ಚೆಲ್ಸಿ ಬ್ರೌನ್ ಅವಳಿಗೆ ಸಹಾಯ ಮಾಡಲು ಮುಂದಾದರು. ಕರ್ಟ್ನಿಯ ಕಥೆ ಕೇಳಿ 28 ವರ್ಷದ ಚೆಲ್ಸಿ ಅವಳಿಗೆ ಲ್ಯಾಪ್‌ಟಾಪ್ ನೀಡಿದಳು, ಅದು ಅವಳ ವರ್ಚುವಲ್ ಕೆಲಸಕ್ಕೆ ಸಹಾಯ ಮಾಡುತ್ತಿದೆ.
ಜನರು ಹಣ ಅಥವಾ ವಸ್ತುಗಳನ್ನು ಕಳುಹಿಸಲು ಒಲವು ತೋರುತ್ತಾರೆ ಎಂದು ನನಗೆ ತಿಳಿದಿದೆ, ಆದರೆ ನಾನು ಅವಕಾಶ ಕಲ್ಪಿಸಲು ಬಯಸುತ್ತೇನೆ ಚೆಲ್ಸಿ ಹೇಳಿಕೊಂಡಿದ್ದಳು. ಆ ಪ್ರಕಾರವೇ ನೆರವಿಗೆ ಬಂದಿದ್ದು, ಹೊಸ ಲ್ಯಾಪ್‌ಟಾಪ್‌ನಿಂದ ಕರ್ಟ್ನಿಯು ಚೆಲ್ಸಿಯ ಹರ್ಲೂಮ್ ಪ್ರಾಜೆಕ್ಟ್‌ಗೆ ಚೆಂದದ ಬ್ಲಾಗ್ ಪೋಸ್ಟ್‌ಗಳನ್ನು ಬರೆಯುತ್ತಾರೆ.
ಜಾಲತಾಣದ ಒಂದು ಪೋಸ್ಟ್ ಲ್ಯಾಪ್ ಟಾಪ್ ಜೊತೆಗೆ ಕೆಲಸವನ್ನು ಹುಡುಕಿಕೊಟ್ಟಿರುವುದು ಸೋಜಿಗದ ಸಂಗತಿಯಾಗಿದೆ.