alex Certify ನೋಡುಗರ ಎದೆ ಝಲ್ ಎನಿಸುತ್ತೆ ಈ ವ್ಯಕ್ತಿ ಮಾಡಿದ ಸ್ಟ್ರೆಚಿಂಗ್ ವ್ಯಾಯಾಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರ ಎದೆ ಝಲ್ ಎನಿಸುತ್ತೆ ಈ ವ್ಯಕ್ತಿ ಮಾಡಿದ ಸ್ಟ್ರೆಚಿಂಗ್ ವ್ಯಾಯಾಮ….!

ಈತನದ್ದು ಸಾಹಸ ಎನ್ನಬೇಕೋ? ಹುಚ್ಚುತನ ಎನ್ನಬೇಕೋ ತಿಳಿಯದು‌. ವ್ಯಕ್ತಿಯೊಬ್ಬ ಬಹುಮಹಡಿ ವಸತಿ ಸಮುಚ್ಛಯದ 12 ನೇ ಮಹಡಿಯಲ್ಲಿ ನಿಂತು ಅಪಾಯಕಾರಿಯಾಗಿ ಸ್ಟ್ರೆಚ್ಚಿಂಗ್ ವ್ಯಾಯಾಮ ಮಾಡುವ ವಿಡಿಯೋ ವೈರಲ್ ಆಗಿದೆ.

ಫರಿದಾಬಾದ್‌ನ ವಿಡಿಯೋ ಇದಾಗಿದ್ದು, ಎದುರು‌ಮನೆಯ ವ್ಯಕ್ತಿ ಮೊಬೈ‌ನಲ್ಲಿ ಈ ಹುಚ್ಚು ಸಾಹಸ ಸೆರೆ ಹಿಡಿದಿದ್ದಾರೆ.

ಬಾಲ್ಕನಿಯ ಹೊರತುದಿಯಯಲ್ಲಿ ನಿಂತು ಅಪಾಯಕಾರಿಯಾಗಿ ಸ್ಟ್ರೆಚ್ ಮಾಡುತ್ತಿದ್ದು, ಕೊಂಚ ಕಾಲು ಜಾರಿದರೂ ಬದುಕುಳಿಯುವುದು ಅನುಮಾನ. ಅಂತಹ ಸ್ಥಳದಲ್ಲಿ ನಿಂತು ಸ್ಟ್ರೆಚ್ ಮಾಡುತ್ತಿದ್ದು, ನೋಡುಗರ ಎದೆ ಝಲ್ ಎನಿಸುವಂತಿದೆ.

BIG NEWS: BJP ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ಕಿಡಿಗೇಡಿಗಳು ಮಾಡಿದ ಪೋಸ್ಟ್ ಏನು…..?

“ವ್ಯಾಯಾಮ ಕರ್ ರಹಾ ಹೈ (ಅವನು ವ್ಯಾಯಾಮ ಮಾಡುತ್ತಿದ್ದಾನೆ)” ಎಂದು ಮಹಿಳೆಯ ಧ್ವನಿ ವಿಡಿಯೋದಲ್ಲಿ ಕೇಳಿಸುತ್ತದೆ. ಕೆಲ ಕ್ಷಣಗಳ ನಂತರ, ಸ್ಟ್ರೆಚ್‌ಗಳನ್ನು ಪೂರ್ಣಗೊಳಿಸಿದ ತರುವಾಯ ಆತ ಬಾಲ್ಕನಿಯ ಒಳಗೆ ಬರುವುದು ಕಾಣಿಸುತ್ತದೆ.

ಒಂದು ನಿಮಿಷ ಮತ್ತು ನಾಲ್ಕು ಸೆಕೆಂಡುಗಳ ವೀಡಿಯೊ ಇದುವರೆಗೆ ಸಾವಿರಾರು ವೀಕ್ಷಣೆಗೊಳಪಟ್ಟಿದೆ. ಇದನ್ನು ನೋಡಿದ ನೆಟ್ಟಿಗರು ಬಗೆಬಗೆಯಾಗಿ ಅಭಿಪ್ರಾಯ ನೀಡಿದ್ದಾರೆ. ಈತನನ್ನು ಅಮೆರಿಕನ್ ಟ್ಯಾಲೆಂಟ್‌ನಲ್ಲಿ ಶೀಘ್ರವೇ ನೋಡಬಹುದು ಎಂದು ಒಬ್ಬರು ಅಭಿಪ್ರಾಯ ನೀಡಿದರೆ, ಮತ್ತೊಬ್ಬರು ಈತನಿಗೆ ಕೌನ್ಸೆಲಿಂಗ್ ಅಗತ್ಯವಿದೆ ಎಂದಿದ್ದಾರೆ. “ಮೂರ್ಖ”, “ಸಾಸ್ತಾ ಸ್ಪೈಡರ್‌ಮ್ಯಾನ್”, “ಕಲಿಯುಗಿ ಕೋತಿ” ಮುಂತಾದ ಹೆಸರುಗಳನ್ನು ಸಹ ನೀಡಿದ್ದಾರೆ.

https://twitter.com/viralvdoz/status/1493289855232937987?ref_src=twsrc%5Etfw%7Ctwcamp%5Etweetembed%7Ctwterm%5E1493289855232937987%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-faridabad-man-hangs-from-12th-floor-balcony-to-do-stretching-exercises-4778360.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...