ಕಟಕ್: ಕಟಕ್ ನ ವಿಕಾಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಚಂಡೀಗಢ ತಂಡದ ಎದುರು ಬರೋಡಾ ಆಟಗಾರ ವಿಷ್ಣು ಸೋಲಂಕಿ ಭರ್ಜರಿ ಶತಕ ಸಿಡಿಸಿದ್ದಾರೆ.
ಮಗಳ ಸಾವಿನ ನೋವನಲ್ಲಿಯೂ ಅವರು ಶತಕ ಬಾರಿಸಿದ್ದಾರೆ. ನವಜಾತ ಪುತ್ರಿಯನ್ನು ಕಳೆದುಕೊಂಡ ದುಃಖದ ನಡುವೆ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ವಿಷ್ಣು ಸೋಲಂಕಿ, ಪುತ್ರಿ ಸಾವಿನ ನೋವಿನಲ್ಲಿ ದಿಟ್ಟ ಹೋರಾಟ ನಡೆಸಿ ಶತಕ ಬಾರಿಸಿದ್ದಾರೆ. 165 ಎಸೆತಗಳಲ್ಲಿ ಅವರು 104 ರನ್ ಗಳಿಸಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ವಿಷ್ಣು ಸೋಲಂಕಿ ಪುತ್ರಿ ಕಳೆದುಕೊಂಡಿದ್ದು, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ ನಂತರ ತಂಡಕ್ಕೆ ಮರಳಿದ್ದರು.