ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಉಕ್ರೇನ್ ಗಡಿಯಲ್ಲಿರೋ ಖಾರ್ಕಿವ್ ಎಂಬ ನಗರದಲ್ಲಿ ಸುಮಾರು 15,000 ಭಾರತೀಯ ವಿದ್ಯಾರ್ಥಿಗಳಿದ್ದು, ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಬಂಕರ್ ಗಳಲ್ಲಿ ಆಶ್ರಯ ಪಡೆದಿರೋ ಇವರಿಗೆ, ಸರಿಯಾಗಿ ಊಟ ಕೂಡ ಸಿಗ್ತಿಲ್ಲ. ತಮ್ಮನ್ನು ಆದಷ್ಟು ಬೇಗ ಉಕ್ರೇನ್ ನಿಂದ ರಕ್ಷಿಸಿ ಭಾರತಕ್ಕೆ ಕರೆತರುವಂತೆ ವಿದ್ಯಾರ್ಥಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮೊರೆಯಿಡುತ್ತಿದ್ದಾರೆ.
ಅದೇ ಭಾಗದಲ್ಲಿರೋ ಮೆಟ್ರೋ ಸ್ಟೇಶನ್ ನಲ್ಲಿ ಆಶ್ರಯ ಪಡೆದಿರೋ ಭಾರತೀಯ ವಿದ್ಯಾರ್ಥಿಯೊಬ್ಬ ಅಲ್ಲಿನ ನೈಜ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಪ್ರತಿಕ್ಷಣವೂ ಸ್ಫೋಟದ ಸದ್ದು ಕೇಳಿಸುತ್ತಿದೆ ಅಂತಾ ಆತ ಹೇಳಿದ್ದಾನೆ.
ಭಾರತೀಯರು ಮಾತ್ರವಲ್ಲ ಇಸ್ರೇಲ್, ಲೆಬನಾನ್ ಹಾಗೂ ಉಕ್ರೇನ್ ಪ್ರಜೆಗಳು ಸಹ ಅಲ್ಲಿದ್ದಾರಂತೆ. ಆದಷ್ಟು ಬೇಗ ಎಲ್ಲರನ್ನೂ ರಕ್ಷಿಸಿ ಅಂತಾ ವಿದ್ಯಾರ್ಥಿ ಬೇಡಿಕೊಂಡಿದ್ದಾನೆ.
https://youtu.be/9k83nQWFnFU