ನವದೆಹಲಿ: ರಷ್ಯಾ ದಾಳಿಯಿಂದ ಯುದ್ಧಪೀಡಿತ ನೆಲೆಯಾಗಿರುವ ಉಕ್ರೇನ್ ನಿಂದ ಆಪರೇಷನ್ ಗಂಗಾ ಹೆಸರಲ್ಲಿ ಭಾರತೀಯರ ಏರ್ ಲಿಫ್ಟ್ ಮಾಡಲಾಗಿದೆ.
ರಾತ್ರಿ 2 ಗಂಟೆಗೆ ದೆಹಲಿಗೆ ಬಂದ ವಿದ್ಯಾರ್ಥಿಗಳ ಎರಡನೇ ತಂಡವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಸ್ವಾಗತಿಸಿದ್ದಾರೆ. ನಾಲ್ಕು ದೇಶಗಳ ಸಹಕಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಶೀಘ್ರವೇ ಎಲ್ಲ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾತ್ರಿ 2 ಗಂಟೆಗೆ ಏರ್ ಇಂಡಿಯಾ ವಿಮಾನ ದೆಹಲಿ ತಲುಪಿದೆ. ಎರಡನೇ ತಂಡದಲ್ಲಿ 250 ವಿದ್ಯಾರ್ಥಿಗಳು ದೆಹಲಿಗೆ ಆಗಮಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು, ಭಾರತೀಯರನ್ನು ವಿಮಾನ ಕರೆತಂದಿದೆ. ರೊಮೇನಿಯಾದಿಂದ ದೆಹಲಿಗೆ ಭಾರತೀಯರ ಏರ್ಲಿಫ್ಟ್ ಮಾಡಲಾಗಿದೆ.
ಉಕ್ರೇನ್ ನಿಂದ ವಿದ್ಯಾರ್ಥಿಗಳು ರೊಮೇನಿಯಾಗೆ ಬಂದಿದ್ದು, ರೊಮೇನಿಯಾದಿಂದ ದೆಹಲಿಗೆ ಮೊದಲ ತಂಡದಲ್ಲಿ 219 ವಿದ್ಯಾರ್ಥಿಗಳು ಮುಂಬೈಗೆ ಆಗಮಿಸಿದ್ದರು.
ದೆಹಲಿಗೆ ಇಂದು ಬೆಳಗ್ಗೆ 250 ಭಾರತೀಯರನ್ನು ಹೊತ್ತ ವಿಮಾನ ರೊಮೇನಿಯಾದ ಬುಖಾರೆಸ್ಟ್ ನಿಂದ ಆಗಮಿಸಲಿದೆ.
ಆಪರೇಷನ್ ಗಂಗಾ ಹೆಸರಲ್ಲಿ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗುತ್ತಿದ್ದು, 240 ಜನರನ್ನು ಹಂಗೇರಿಯಾದ ಬುಡಾಪೆಸ್ಟ್ ನಿಂದ ದೆಹಲಿಗೆ ಕರೆತರಲಾಗುತ್ತಿದೆ.