ರಷ್ಯಾ- ಉಕ್ರೇನ್ ಯುದ್ಧ: ಉಕ್ರೇನ್ನ ಅಪಾರ್ಟ್ಮೆಂಟ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ ಪಡೆ 26-02-2022 6:46PM IST / No Comments / Posted In: Latest News, Live News, International ರಷ್ಯಾದ ಮಿಲಿಟರಿ ಪಡೆ ಹಾಗೂ ಉಕ್ರೇನಿಯನ್ ಪಡೆಗಳ ನಡುವೆ ಕಾದಾಟ ನಡೆಯುತ್ತಿದ್ದು ಕೈವ್ನಲ್ಲಿ ರಾತ್ರೋರಾತ್ರಿ ಬಹುಮಹಡಿ ಅಪಾರ್ಟ್ಮೆಂಟ್ ಬ್ಲಾಕ್ನಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಕ್ಷಿಪಣಿ ದಾಳಿ ನಡೆಯುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಕನಿಷ್ಟ ಐದು ಮಹಡಿಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ಸ್ಫೋಟಗೊಂಡಿರುವುದನ್ನು ಕಾಣಬಹುದಾಗಿದೆ. ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೋ ಕಟ್ಟಡವನ್ನು ಕ್ಷಿಪಣಿಯಿಂದ ಧ್ವಂಸಗೊಳಿಸಲಾಗಿದೆ. ಕೈವ್ನಲ್ಲಿ ಪ್ರಸ್ತುತ ರಷ್ಯಾದ ಪಡೆಯಿಲ್ಲ. ಆದರೆ ಅವರು ಹಲವಾರು ದಿಕ್ಕುಗಳಿಂದ ಕೈವ್ನ್ನು ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂದು ಮೇಯರ್ ಹೇಳಿದ್ದಾರೆ. ಉಕ್ರೇನ್ನ ವಿದೇಶಾಂಗ ಸಚಿವ ಡ್ಮೈಟ್ರೋ ಕುಲೆಬಾ ಕ್ಷಿಪಣಿ ದಾಳಿಯಿಂದ ಧ್ವಂಸಗೊಂಡ ಅಪಾರ್ಟ್ಮೆಂಟ್ನ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. Kyiv, our splendid, peaceful city, survived another night under attacks by Russian ground forces, missiles. One of them has hit a residential apartment in Kyiv. I demand the world: fully isolate Russia, expel ambassadors, oil embargo, ruin its economy. Stop Russian war criminals! pic.twitter.com/c3ia46Ctjq — Dmytro Kuleba (@DmytroKuleba) February 26, 2022