ಕೀವ್: ಉಕ್ರೇನ್ ನಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ರಷ್ಯಾ ದಾಳಿಯಿಂದ ನಲುಗಿದ ಉಕ್ರೇನ್ ನಲ್ಲಿ ಇಂಟರ್ ನೆಟ್ ಸಂಪರ್ಕದ ಮೇಲೆ ಪರಿಣಾಮವಾಗಿ ಹಲವೆಡೆ ಸಂಪರ್ಕ ಕಡಿತವಾಗಿದೆ. ಮತ್ತೆ ಕೆಲವೆಡೆ ಇಂಟರ್ ನೆಟ್ ವೇಗ ಕಡಿಮೆಯಾಗಿದೆ.
ಉಕ್ರೇನ್ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಇಂಟರ್ನೆಟ್ ಕಡಿತವಾಗಿದೆ. ಇಂಟರ್ ನೆಟ್ ಕಂಪನಿ ವೇಗದಲ್ಲಿ ಕುಸಿತಕಂಡಿದ್ದು, ವೇಗ ಶೇಕಡ 20 ರಷ್ಟು ಕಡಿಮೆಯಾಗಿದೆ. ರಷ್ಯಾ ದಾಳಿಯಿಂದಾಗಿ ಇಂಟರ್ನೆಟ್ ಸಂಪರ್ಕದ ಮೇಲೆ ಪರಿಣಾಮ ಉಂಟಾಗಿದ್ದು, ಇಂಟರ್ನೆಟ್ ವೇಗದಲ್ಲಿ ಕುಸಿತವಾಗಿದೆ.